ಸಚಿವರ ಕಾರನ್ನು ತಡೆದು ವಿಶೇಷ ಕೆಲಸಕ್ಕೆ ಮನವಿ ಮಾಡಿದ ಯುವತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವತಿಯೊಬ್ಬಳು ಸಚಿವರ ಕಾರನ್ನು ತಡೆದು ವಿಶೇಷ ಮನವಿಯೊಂದನ್ನು ಮಾಡಿದ್ದಾಳೆ.
ಹರಿಯಾಣ ಮೂಲದ 25 ವರ್ಷದ ಸೋನಿಯಾ ಪಂಜಾಬ್‌ನ ಸಾರಿಗೆ ಸಚಿವ ಅಮರಿಂದರ್ ಸಿಂಗ್ ರಾಜ ಅವರ ಕಾರ್‌ನ್ನು ನಿಲ್ಲಿಸಿ ಬೇಡಿಕೆಯೊಂದನ್ನು ಇಟ್ಟಿದ್ದಾಳೆ.
ನಾನು ಬಸ್ ಡ್ರೈವರ್ ಆಗಬೇಕು, ಸಹಾಯ ಮಾಡಿ ಎಂದು ಕೇಳಿದ್ದಾಳೆ. ಸಾಮಾನ್ಯವಾಗಿ ಯಾವುದಾದರೂ ಸರ್ಕಾರಿ ನೌಕರಿ ಬೇಕು, ಹಣ ಬೇಕು ಎಂದು ಕೇಳುವಾಗ ಈ ಯುವತಿ ಮಾತ್ರ ನಾನು ಬಸ್ ಡ್ರೈವರ್ ಆಗಿ ಕೆಲಸ ಮಾಡಬೇಕು, ಡ್ರೈವಿಂಗ್ ಕಲಿತಿದ್ದೇನೆ. ಕೆಲಸ ಪಡೆಯೋದು ಹೇಗೆ ಗೊತ್ತಿಲ್ಲ. ನಾನು ಒಬ್ಬ ಕ್ರೀಡಾಪಟು ಎಂದೆಲ್ಲಾ ಹೇಳಿಕೊಂಡಿದ್ದಾಳೆ.

ನಂತರ ಸಚಿವರು ಸಂಬಂಧಪಟ್ಟವರಿಗೆ ಕರೆ ಮಾಡಿ, ‘ಹುಡುಗಿಯೊಬ್ಬರು ನಿಮಗೆ ಕರೆ ಮಾಡ್ತಾರೆ. ಅವರ ಡ್ರೈವಿಂಗ್ ನೋಡಿ. ಚೆನ್ನಾಗಿ ಡ್ರೈವಿಂಗ್ ಮಾಡುವುದಾದರೆ ಅವರಿಗೆ ಕೆಲಸ ನೀಡೋಣ’ ಎಂದು ಹೇಳಿದ್ದಾರೆ.
ಪುರುಷರೇ ಹೆಚ್ಚಿರುವ ಡ್ರೈವಿಂಗ್ ದುನಿಯಾದಲ್ಲಿ ಆಕೆ ಹೇಗೆ ಬದುಕುತ್ತಾಳೆ ಎಂದು ಅವರು ಕೇಳಿದ್ದು, ನಾನು ಇರೋದು ಒಬ್ಬಳೆ, ಅಮ್ಮ ಊರಲ್ಲಿದ್ದಾರೆ. ತಂದೆ ಇಲ್ಲ, ನನಗೇನಾಗೋಕೆ ಸಾಧ್ಯ? ಎಲ್ಲವನ್ನು ಸಹಿಸಿಕೊಂಡು ಕೆಲಸ ಮಾಡ್ತೀನಿ ಕೆಲಸ ಕೊಡಿ ಎಂದು ಮನವಿ ಮಾಡಿದ್ದಾಳೆ.
ಭಾರತದಲ್ಲಿ ಮಹಿಳಾ ಬಸ್ ಡ್ರೈವರ್‌ಗಳ ಸಂಖ್ಯೆ ವಿರಳವಾಗಿದೆ. ಅಲ್ಲದೇ ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆ ಬಗ್ಗೆ ಹಲವು ಮಹಿಳೆಯರಿಗೆ ಅಸಮಾಧಾನ ಇದೆ. ಇಂಥ ಸಮಯದಲ್ಲಿ ಮಹಿಳೆಯರೇ ಬಸ್ ಡ್ರೈವ್ ಮಾಡಿದರೆ ಅದು ಖುಷಿ ವಿಚಾರ ಎಂದು ಸಚಿವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!