ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಯುವತಿ ಮೇಲೆ ಯುವಕರಿಬ್ಬರು ಅತ್ಯಾಚಾರ ಎಸಗಿದ್ದಾರೆ. ಕೇರಳ ಮೂಲದ ಯುವತಿ ರ‍್ಯಾಪಿಡೊ ಬುಕ್ ಮಾಡಿದ್ದಾರೆ. ಪಿಕಪ್ ಸವಾರ ಹಾಗೂ ಆತನ ಸ್ನೇಹಿತ ಗ್ಯಾಂಗ್ ರೇಪ್ ಮಾಡಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ರ‍್ಯಾಪಿಡೋ ಬುಕ್ ಮಾಡಿದ್ದಳು. ಯುವತಿ ಮದ್ಯಪಾನ ಮಾಡಿದ್ದು ಸವಾರನಿಗೆ ತಿಳಿದಿತ್ತು. ಅರ್ಧ ದಾರಿಗೆ ಯುವತಿ ಅರೆ ಪ್ರಜ್ಞಾವಸ್ತೆಯಲ್ಲಿ ಇದ್ದಳು. ಇದನ್ನು ಗಮನಿಸಿ ನೀಲಾದ್ರಿ ನಗರದ ತನ್ನ ಮನೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ.
ಇಬ್ಬರೂ ಅತ್ಯಾಚಾರ ಎಸಗಿ ಯುವತಿಯನ್ನು ಬೆಳಗ್ಗೆ ವಾಪಾಸ್ ಕಳಿಸಿದ್ದಾರೆ. ವಿಷಯ ಬಾಯಿಬಿಟ್ಟರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.