Tuesday, May 30, 2023

Latest Posts

ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿ ಎಳೆದೊಯ್ದ ಕಾಮುಕರು, ಕಾರ್‌ನಲ್ಲೇ ಸಾಮೂಹಿಕ ಅತ್ಯಾಚಾರ: ಬೆಚ್ಚಿಬಿತ್ತು ಬೆಂಗಳೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಸಾಮೂಹಿ ಅತ್ಯಾಚಾರ ಎಸಗಿದ ನೀಚ ಘಟನೆ ನಡೆದಿದೆ.
ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿಯನ್ನು ಎಳೆದೊಯ್ದ ಕಾಮುಕರು ಕಾರ್‌ನಲ್ಲಿಯೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಮಾ.೨೫ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ನೌಕಕರು ಇರುವ ನ್ಯಾಷನಲ್ ಗೇಮ್ಸ್ ವಿಲೇಜ್ ಪಾರ್ಕ್‌ನಲ್ಲಿ ಯುವತಿ ಹಾಗೂ ಆಕೆಯ ಸ್ನೇಹಿತ ಕುಳಿತಿದ್ದ. ನಾಲ್ವರು ಯುವಕರು ಏಕಾಏಕಿ ಬಂದಿದ್ದು, ಹುಡುಗನನ್ನು ಹೆದರಿಸಿ ಓಡಿಸಿದ್ದಾರೆ. ಆಕೆಯನ್ನು ಎಳೆದುಕೊಂಡು ಕಾರ್ ಒಳಗೆ ತಳ್ಳಿದ್ದಾರೆ.

ಚಲಿಸುತ್ತಿದ್ದ ಕಾರ್‌ನಲ್ಲಿ ನಾಲ್ವರು ಅತ್ಯಾಚಾರ ಎಸಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿಯಿಡೀ ಅತ್ಯಾಚಾರ ಎಸಗಿದ್ದು, ಬೆಳಗಿನ ಜಾವ ಆಕೆಯನ್ನು ರಸ್ತೆಯಲ್ಲಿ ಬಿಟ್ಟು ಕಾಮುಕರು ಪರಾರಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!