ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಭಾವಿಕೇರಿಯ ಯುವಕ ಹರಿರಾಮ ಗೋಪಾಲ ಭಟ್ಟ(38) ಅವರು ಶಂಕಿತ ಜ್ವರಕ್ಕೆಅಕಾಲಿಕವಾಗಿ ಬಲಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಜ್ವರದಿಂದ ಅಸ್ವಸ್ಥರಾಗಿದ್ದ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ಅಲ್ಲಿ ಬಿಳಿ ರಕ್ತಕಣಗಳು ಕಡಿಮೆ ಆಗಿರುವುದು.
ಆರಂಭಿಕ ಪರೀಕ್ಷೆಯಲ್ಲಿ ಕಂಡು ಬಂದರೂ ನಂತರ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಮತ್ತೆ ಬೇರೆ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಲ್ಲಿ ಬಹು ಅಂಗಾಂಗಗಳ ವೈಪಲ್ಯ ಕಂಡು ಬಂದಿದ್ದು ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಇವರ ಸಾವಿಗೆ ಡೆಂಗ್ಯೂ ಜ್ವರ ಕಾರಣವಾಯಿತುಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದ್ದು ಉ.ಕ ಜಿಲ್ಲೆಯಲ್ಲಿ ಡೆಂಗ್ಯೂಗೆ ಮೊದಲ ಬಲಿ ಇದಾಗಲಿದೆ.
ಭಾವಿಕೇರಿಯ ಖ್ಯಾತ ಜ್ಯೋತಿಷಿಯಾಗಿದ್ದ ದಿವಂಗತ ರಾಮ ಭಟ್ಟ ಅವರ ಮೊಮ್ಮಗ.