ಟ್ರೋಫಿಯನ್ನು ಕೈಯಲ್ಲಿ ಮುಟ್ಟದ ಪ್ರಧಾನಿ ಮೋದಿ: ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಯಿತು Leader-Dictator!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಟಿ20 ವಿಶ್ವ ಕಪ್​ ಗೆದ್ದು ಭಾರತಕ್ಕೆ ಬಂದ ಟೀಮ್ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ ಸನ್ಮಾನಿಸಿದ್ದಾರೆ. ಈ ವೇಳೆ ಅವರು ಟೀಮ್ ಇಂಡಿಯಾದ ಆಟಗಾರರ ಜತೆ ಅವರು ವಿಶ್ವ ಕಪ್​​ನೊಂದಿಗೆ ಫೋಟೊಗೆ ಫೋಸ್ ಕೊಟ್ಟಿದ್ದಾರೆ. ಆದರೆ ಅವರು ವಿಶ್ವ ಕಪ್​ ಅನ್ನು ಕೈಯಲ್ಲಿ ಮುಟ್ಟಿಲ್ಲ. ಬದಲಿಗೆ ರೋಹಿತ್​ ಮತ್ತು ರಾಹುಲ್ ದ್ರಾವಿಡ್ ಕೈಯನ್ನು ಮಾತ್ರ ಹಿಡಿದುಕೊಂಡಿದ್ದಾರೆ.ಆ ರೀತಿ ಮಾಡಿದ ಫೋಟೋ ವೈರಲ್ ಆಗಿದೆ.

ಗುರುವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ ಆಟಗಾರರು ಬಳಿಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು.ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು.

ಟ್ರೋಫಿ ಜೊತೆ ಇಡೀ ತಂಡದೊಂದಿಗೆ ಮೋದಿ ಪೋಸ್‌ ನೀಡಿದ್ದರು. ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದರಲ್ಲಿ ಮೋದಿ ಟ್ರೋಫಿಯನ್ನು ಹಿಡಿದುಕೊಂಡಿರಲೇ ಇಲ್ಲ. ನಾಯಕ ರೋಹಿತ್‌ ಶರ್ಮ ಹಾಗೂ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಪ್ರಧಾನಿ ಎದುರು ಟ್ರೋಫಿಯನ್ನು ಹಿಡಿದಿದ್ದರೆ, ಪ್ರಧಾನಿ ಮೋದಿ ಇವರಿಬ್ಬರ ಕೈಗಳನ್ನು ಹಿಡಿದು ಫೋಟೋಗೆ ಪೋಸ್‌ ನೀಡಿದ್ದರು. ಆ ಮೂಲಕ ಟ್ರೋಫಿ ಗೆಲ್ಲಿಸಿಕೊಟ್ಟವರಿಗೆ ಕ್ರೆಡಿಟ್‌ ನೀಡಿ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ. ಈ ಕ್ಷಣದ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಫೋಟೋವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ ಅಭಿಮಾನಿಗಳು ಲೀಡರ್‌ ಹಾಗೂ ಸರ್ವಾಧಿಕಾರದ ನಡುವೆ ಇರುವ ವತ್ಯಾಸವಿದು ಎಂದು ಹೇಳಿ, ಇಂದಿರಾ ಗಾಂಧಿಯವರು 1983ರಲ್ಲಿ ವಿಶ್ವಕಪ್‌ ಟ್ರೋಫಿ ಹಿಡಿದ ಚಿತ್ರವನ್ನು ಹಂಚಿಕೊಂಡಿದ್ದಾರೆ.

1983ರಲ್ಲಿ ಕಪಿಲ್‌ ದೇವ್‌ ನೇತೃತ್ವದ ಭಾರತ ತಂಡ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿ ವಿಶ್ವಕಪ್‌ ಗೆದ್ದಿತ್ತು. ತವರಿಗೆ ವಾಪಸಾಗಿದ್ದ ತಂಡ ಕೂ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಪ್ರಧಾನಿ ನಿವಾಸದಲ್ಲಿ ಭೇಟಿ ಮಾಡಿತ್ತು. ಈ ವೇಳೆ ಇಂದಿರಾ ಗಾಂಧಿ ವಿಶ್ವಕಪ್‌ ಟ್ರೋಫಿಯನ್ನು ಹಿಡಿದು ಪೋಸ್‌ ನೀಡಿದ್ದರೆ, ಕಪಿಲ್‌ ದೇವ್‌ ನೇತೃತ್ವದ ತಂಡ ಅವರ ಹಿಂದೆ ನಿಂತುಕೊಂಡಿತ್ತು.

ಈಗ ಬಿಜೆಪಿ ಹಾಗೂ ನರೇಂದ್ರ ಮೋದಿ ಅಭಿಮಾನಿಗಳು ಈ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇದರಲ್ಲಿ ಲೀಡರ್‌ ಹಾಗೂ ಡಿಕ್ಟೇಟರ್‌ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಈ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಟ್ರೋಫಿ ಹಿಡಿದುಕೊಂಡಿದ್ದರೇ, ಪ್ರಧಾನಿ ಮೋದಿ ಅವರ ಕೈಗಳನ್ನು ಹಿಡಿದುಕೊಂಡಿದ್ದಾರೆ. ಎಂತಹ ನಾಯಕ ಎಂದು ನೆಟ್ಟಿಗರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!