ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧಾರ್ ಕಾರ್ಡ್ ಮಾಡಿದವರು ಪ್ರತಿ 10 ವರ್ಷಕ್ಕೊಮ್ಮೆ ಅಪ್‌ಡೇಟ್ ಮಾಡಿಕೊಳ್ಳಬೇಕು. ಅಂದರೆ ನೀವು ಆಧಾರ್ ಕಾರ್ಡ್ ಮಾಡಿಸಿ 10 ವರ್ಷವಾಗಿದ್ದರೆ ಅಪ್‌ಡೇಟ್ ಮಾಡಿಕೊಳ್ಳಬೇಕು. ಹೀಗೆ 10 ಹಾಗೂ 10ಕ್ಕಿಂತ ಮೇಲ್ಪಟ್ಟ ವರ್ಷಗಳಾಗಿರುವ ಆಧಾರ್ ಕಾರ್ಡ್‌ದಾರರು ಸದ್ಯ ಯಾವುದೇ ದಂಡ ಶುಲ್ಕವಿಲ್ಲದೆ ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಮಾಡಿದೆ.
ಇದೀಗ ಮತ್ತೆ ಗಡುವನ್ನು ವಿಸ್ತರಿಸಿದ್ದು, ಸೆಪ್ಟೆಂಬರ್ 14ರ ವರೆಗೆ ಆಧಾರ್ ಕಾರ್ಡ್ ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು ಅನುಮತಿ ನೀಡಿದೆ. ಆದರೆ ಸೆಪ್ಟೆಂಬರ್ 15ರಿಂದ ದಂಡ ಪಾವತಿಸಬೇಕು.
ಅಪ್‌ಡೇಟ್ ಮಾಡದವರ ಆಧಾರ್ ಕಾರ್ಡ್ ಮಾನ್ಯವಾಗಿರುವುದಿಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹೀಗಾಗಿ ಅಪ್‌ಡೇಟ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಅಪ್‌ಡೇಟ್‌ನಲ್ಲಿ ಪ್ರಮುಖವಾಗಿ ವಿಳಾಸ, ಫೋನ್ ನಂಬರ್, ಫೋಟೋ, ಇಮೇಲ್ ಐಡಿ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ವಿಳಾಸ ಸೇರಿದಂತೆ ಯಾವುದೇ ಮಾಹಿತಿಯಲ್ಲಿ ಬದಲಾವಣೆ ಇದ್ದರೆ ಸೂಕ್ತ ದಾಖಲೆ ಸಲ್ಲಿಸಿ ಅಪ್‌ಡೇಟ್ ಮಾಡಿಕೊಳ್ಳಬೇಕು.
ಆಧಾರ್ ಕಾರ್ಡ್ ಅಪ್‌ಡೇಟ್ ಎರಡು ರೀತಿಯಲ್ಲಿ ಮಾಡಲು ಸಾಧ್ಯವಿದೆ. ಆಧಾರ್ ಅಧಿಕೃತ ಕೇಂದ್ರಕ್ಕ ತೆರಳಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಮತ್ತೊಂದು ಆನ್‌ಲೈನ್ ಮೂಲಕವೂ ಅಪ್‌ಡೇಟ್ ಮಾಡಿಕೊಳ್ಳಬಹುದು.
Adhar phone number link