ಭ್ರಷ್ಟತೆ ಮಧ್ಯೆ ಸಿಲುಕಿದ ಆಮ್‌ ಆದ್ಮಿ ಪಕ್ಷ: ಸಚಿವ ರಾಜ್‌ಕುಮಾರ್‌ ಆನಂದ್‌ ರಾಜೀನಾಮೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಬಂಧನವಾಗಿದ್ದು, ಇತ್ತ ಆಮ್‌ ಆದ್ಮಿ ಪಕ್ಷಕ್ಕೆ (AAP) ಮತ್ತೊಂದು ಶಾಕ್‌ ಎದುರಾಗಿದೆ.

ದೆಹಲಿ ಸಚಿವ ರಾಜ್ ಕುಮಾರ್ ಆನಂದ್ (Raaj Kumar Anand) ಸರ್ಕಾರ ಮತ್ತು ಪಕ್ಷವನ್ನು ತೊರೆದಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಹೋರಾಡುವ ಕುರಿತು ಎಎಪಿಯ ಬಲವಾದ ಸಂದೇಶವನ್ನು ನೋಡಿದ ನಂತರ ನಾನು ಎಎಪಿಗೆ ಸೇರಿದ್ದೆ. ಇಂದು ಪಕ್ಷ ಭ್ರಷ್ಟತೆ ಮಧ್ಯೆ ಸಿಲುಕಿದೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಸಮಾಜ ಕಲ್ಯಾಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಚಿವರಾಗಿದ್ದ ಆನಂದ್ ಸ್ಪಷ್ಟಪಡಿಸಿದ್ದಾರೆ.

ಮದ್ಯ ನೀತಿಯ ಪ್ರಕರಣದಿಂದ ಪಕ್ಷದ ಮೇಲಾದ ಪರಿಣಾಮದಿಂದಾಗಿ ರಾಜ್‌ಕುಮಾರ್‌ ಆನಂದ್‌ ಅವರು, ತಮ್ಮ ಸಚಿವ ಸ್ಥಾನ ಮತ್ತು ಎಎಪಿಗೆ ರಾಜೀನಾಮೆ ನೀಡಿದ್ದಾರೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!