Friday, October 7, 2022

Latest Posts

ವಾರಾಂತ್ಯದಲ್ಲಿ 50ಕೋಟಿಯನ್ನೂ ಸಂಪಾದಿಸಲಿಲ್ಲ ಅಮೀರ್‌ ಖಾನ್‌ ಸಿನೆಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರೇಕ್ಷಕರಿಂದ ಬಹಿಷ್ಕಾರಕ್ಕೆ ಗುರಿಯಾದ ಅಮೀರ್‌ ಖಾನ್‌ ಅಭಿನಯದ ಲಾಲ್‌ ಸಿಂಗ್‌ ಚಡ್ಡಾ ಚಲನಚಿತ್ರವು ವಾರಾಂತ್ಯದಲ್ಲಿ 50ಕೋಟಿ ರೂಪಾಯಿಯನ್ನು ಸಂಪಾದಿಸಲು ವಿಫಲವಾಗಿದೆ.

ವರದಿಗಳ ಪ್ರಕಾರ ಲಾಲ್‌ ಸಿಂಗ್‌ ಚಡ್ಡಾ ಚಿತ್ರವು ಭಾನುವಾರ 10ಕೋಟಿ ಗಳಿಕೆ ಮಾಡಿದ್ದು ಇದರೊಂದಿಗೆ ವಾರಾಂತ್ಯದ ವೇಳೆಗೆ ಒಟ್ಟೂ 37 ಕೋಟಿರೂ.ಗಳನ್ನು ಸಂಪಾದಿಸಿದ್ದು ಇದು ಅಮೀರ್‌ ಖಾನ್‌ ಅಬಿನಯದ ಚಿತ್ರಗಳಲ್ಲೇ ಅತೀ ಕಡಿಮೆ ಕಮಾಯಿ ಮಾಡಿದ ಚಿತ್ರ ಎನಿಸಿದೆ.

ಲಾಲ್ ಸಿಂಗ್ ಚಡ್ಡಾ ಮೊದಲ ದಿನದಂದು ಬಾಕ್ಸ್ ಆಫೀಸ್‌ನಲ್ಲಿ 12 ಕೋಟಿ ರೂಪಾಯಿ ಗಳಿಸಿತು. ಸೋಷಿಯಲ್ ಮೀಡಿಯಾದಲ್ಲಿ ಕ್ಯಾನ್ಸಲ್ ಕಲ್ಚರ್ ಮತ್ತು ಬಹಿಷ್ಕಾರದ ಟ್ರೆಂಡ್ ಗೆ ಈ ಸಿನಿಮಾ ಬಲಿಯಾಯಿತು ಎಂದೇ ಹೇಳಬಹುದು.

ಅದ್ವೈತ್ ಚಂದನ್ ನಿರ್ದೇಶಿಸಿದ ಲಾಲ್ ಸಿಂಗ್ ಚಡ್ಡಾವು ಹಾಲಿವುಡ್ ಚಲನಚಿತ್ರವಾದ ಫಾರೆಸ್ಟ್ ಗಂಪ್‌ನ ಅಧಿಕೃತ ರಿಮೇಕ್ ಆಗಿದೆ. ಹಿಂದಿ ರೂಪಾಂತರದಲ್ಲಿ ಕರೀನಾ ಕಪೂರ್ ಖಾನ್, ನಾಗ ಚೈತನ್ಯ ಮತ್ತು ಮೋನಾ ಸಿಂಗ್ ನಿರ್ಣಾಯಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ಬಿಡುಗಡೆಗೂ ಮುಂಚೆಯೇ ಅನೇಕ ರೀತಿಯಲ್ಲಿ ಸುದ್ದಿಯಲ್ಲಿತ್ತು. ಈ ಹಿಂದೆ ಅಮೀರ್ ಮತ್ತು ಕರೀನಾ ನೀಡಿದ ಹೇಳಿಕೆಗಳಿಂದಾಗಿ ನೆಟಿಜನ್‌ಗಳು ಚಿತ್ರ ಬಹಿಷ್ಕಾರಕ್ಕೆ ಕರೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!