ಭಗತ್‌ ಸಿಂಗ್‌ ಹುಟ್ಟೂರಲ್ಲಿ ಇಂದು ಮಾನ್‌ ಪ್ರಮಾಣವಚನ: ಪಂಜಾಬ್‌ ನಲ್ಲಿ ಆರಂಭವಾಗಲಿದೆ ಆಪ್‌ ಆಡಳಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಂಜಾಬ್‌ ನೂತನ ಮುಖ್ಯ ಮಂತ್ರಿಯಾಗಿ ಇಂದು ಆಮ್​ ಆದ್ಮಿ ಪಕ್ಷದ ಭಗವಂತ್​ ಮಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಹುಟ್ಟೂರಾದ ಶಾಹಿದ್‌ ಭಗತ್‌ ಸಿಂಗ್‌ ಜಿಲ್ಲೆಯ ಖಟ್ಕರ್ ಕಲಾನ್​​ ಗ್ರಾಮದಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೆರವೇರಲಿದೆ.
ದೆಹಲಿ ಮುಖ್ಯಮಂತ್ರಿ, ಆಪ್​ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ ಸೇರಿ ಪಕ್ಷದ ವಿವಿಧ ಪ್ರಮುಖ ಮುಖಂಡರು ಪಾಲ್ಗೊಳ್ಳುವರು. ಪಂಜಾಬ್​ ಸಿಎಂ ಆಗಿ ನಾನೊಬ್ಬನೇ ಅಲ್ಲ, ರಾಜ್ಯದ 3 ಕೋಟಿ ಜನರು ನನ್ನೊಂದಿಗೆ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಭಗವಂತ್​ ಮಾನ್​ ಹೇಳಿದ್ದಾರೆ.
ಸಮಾರಂಭಕ್ಕೆ ಮಹಿಳೆಯರು ಹಳದಿ ಬಣ್ಣದ ದುಪ್ಪಟ್ಟಾ, ಪುರುಷರು ಹಳದಿ ಬಣ್ಣದ ಟರ್ಬನ್‌ (ಟೋಪಿ) ಧರಿಸಿ ಬರುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಸಮಾರಂಭದಲ್ಲಿ ಸುಮಾರು 3 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 50ಎಕರೆ ಜಾಗದಲ್ಲಿಸಮಾರಂಭ ನಡೆಯಲಿದ್ದು, 10 ಸಾವಿರಕ್ಕೂ ಅಧಿಕ ರಕ್ಷಣಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೂ ಜಿಲ್ಲಾಡಳಿತ ರಜೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!