ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್, ದೆಹಲಿಯಲ್ಲಿ ಶಾಲೆಯ ಬದಲು ಬಾರ್ ತೆರೆದಿದ್ದಾರೆ ಎಂದು ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿ ಮದ್ಯ ಹಗರಣದಿಂದ 2,026 ಕೋಟಿ ರೂಪಾಯಿ ನಷ್ಟವಾಗಿದ ಎಂಬುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಪೊರಕೆಯೊಂದಿಗೆ ಅಧಿಕಾರಿಕ್ಕೆ ಬಂದವರು ಪಾಠಶಾಲಾಗಳಿಗೆ ಬದಲಾಗಿ ಮಧುಶಾಲಾ ತೆರೆದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಅಬಕಾರಿ ಹಗರಣದಲ್ಲಿ 8 ಮಂದಿ ಸಚಿವರು ಮತ್ತು 15 ಮಂದಿ ಶಾಸಕರು ಜೈಲಿಗೆ ಹೋದರು. ಸ್ವತಃ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಅವರು ಮಾಡಿದ ಪಾಪಗಳು ಬಹಳ ದೊಡ್ಡವು ಎಂದು ಅನುರಾಗ್ ಠಾಕೂರ್ ಹೇಳಿದರು.
ಅರವಿಂದ್ ಕೇಜ್ರಿವಾಲ್ ಅವರೇ, ಇದರ ಲಾಭ ಯಾರಿಗೆ ಬಂತು ಹೇಳಿ? ಎಎಪಿ ನಾಯಕರೆಲ್ಲ ಜೈಲಿಗೆ ಹೋಗಿದ್ದಾರೆ. ಅವರ ಪಕ್ಷದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿಯೂ ಉಳಿದಿಲ್ಲ ಎಂದು ಠಾಕೂರ್ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಎಎಪಿ ಅಧಿಕಾರದಿಂದ ತೊಲಗಬೇಕಾದ್ದು ಅನಿವಾರ್ಯವಾಗಿದೆ. ಕೊರೋನಾ ಅವಧಿಯಲ್ಲಿ ಸೌಲಭ್ಯಗಳ ಕೊರತೆಯಿದ್ದಾಗ ಆಮ್ ಆದ್ಮಿ ಪಕ್ಷವು ಮದ್ಯದ ಹಗರಣದ ಬಟ್ಟೆಯನ್ನು ನೇಯುವಲ್ಲಿ ನಿರತವಾಗಿತ್ತು ಮತ್ತು ಸಾರ್ವಜನಿಕರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದರು. ಇಂತಹ ಸರಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ದೆಹಲಿಯ ಆಮ್ ಆದ್ಮಿ ಸರ್ಕಾರ 10 ವರ್ಷಗಳಲ್ಲಿ ಕೇವಲ ಹಗರಣಗಳನ್ನು ಮಾತ್ರ ಮಾಡಿದೆ. ಸಾರ್ವಜನಿಕರ ಬಗ್ಗೆ ಏನೂ ಯೋಚಿಸಿಲ್ಲ ಎಂದು ಅವರು ಕಿಡಿ ಕಾರಿದರು.