CRIME| ಹುಡುಗಿಗಾಗಿ ನಡೆದೇ ಹೋಯ್ತು ಭೀಕರ ಕೊಲೆ: ಹೃದಯ, ಮರ್ಮಾಂಗ ಪೀಸ್‌ ಪೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅವರಿಬ್ಬರೂ ಸ್ನೇಹಿತರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಇಬ್ಬರ ನಡುವೆ ಸ್ನೇಹವೂ ಇದೆ. ಆದರೆ, ಒಂದು ಹುಡುಗಿಯ ಮೇಲಿನ ಪ್ರೀತಿ ಸ್ನೇಹಿತನ ಕೊಲೆಯಲ್ಲಿ ಅಂತ್ಯ ಕಂಡಿದೆ.

ನಾಗರಕರ್ನೂಲ್ ಜಿಲ್ಲೆಯ ಚಾರುಕೊಂಡ ಮಂಡಲದ ಸಿರಿಸನಗಂದದ ನೆನವತ್ ನವೀನ್ (20) ನಲ್ಗೊಂಡ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಫೈನಲಿಸ್ಟ್ (ಇಇಇ) ಓದುತ್ತಿದ್ದಾನೆ. ಅದೇ ಕಾಲೇಜಿನಲ್ಲಿ ಓದುತ್ತಿರುವ ಹರಿಹರ ಕೃಷ್ಣ ಎಂಬಾತನಿಗೆ ನವೀನ್ ಸ್ನೇಹಿತನಾಗಿದ್ದಾನೆ. ಒಂದೇ ಹುಡುಗಿಯ ಇಬ್ಬರ ಪ್ರೀತಿ ನವೀನ್‌ ಕೊಲೆಗೆ ಕಾರಣವಾಗಿದೆ.

ಸ್ನೇಹಿತ ನವೀನ್ ತಾನು ಪ್ರೀತಿಸಿದ ಯುವತಿಗೆ ಹತ್ತಿರವಾಗುವುದನ್ನು ಕೃಷ್ಣನಿಗೆ ಸಹಿಸಲಾಗಲಿಲ್ಲ. ಆತ್ಮೀಯ ಗೆಳೆಯನೆಂದು ನೋಡದೆ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಒಂದು ವಾರದ ನಂತರ ಪೊಲೀಸರ ಮುಂದೆ ಶರಣಾಗಿದ್ದಾನೆ. ಇದೇ ತಿಂಗಳ 17ರಂದು ಪಾರ್ಟಿ ಮಾಡೋಣ ಎಂದು ನವೀನ್‌ನನ್ನು ಅಬ್ದುಲ್ಲಾಪುರಮೆಟ್‌ನಲ್ಲಿರುವ ತನ್ನ ಕೋಣೆಗೆ ಕರೆದಿದ್ದ. ಇಬ್ಬರು ಪಾರ್ಟಿ ಮಾಡುತ್ತಿದ್ದಾಗ ಹುಡುಗಿಯ ವಿಷಯದಲ್ಲಿ ಜಗಳವಾಗಿದೆ. ನವೀನ್ ಕೂಡಲೇ ತಂದೆ ಶಂಕರಯ್ಯ ಅವರಿಗೆ ಕರೆ ಮಾಡಿ ಜಗಳದ ವಿಷಯ ತಿಳಿಸಿದರು. ಶಂಕರಯ್ಯ ಹರಿಯನ್ನು ಮಾತನಾಡಿಸಿ ಸಂಧಾನ ಮಾಡಿದ್ದರು. ಅಷ್ಟರಲ್ಲಿ ನವೀನ್ ನಾಲ್ಕು ದಿನಗಳಿಂದ ಕಾಲೇಜಿಗೆ ಹೋಗುತ್ತಿಲ್ಲ ಎಂಬ ವಿಷಯ ಅವರ ತಂದೆ ಶಂಕರಯ್ಯ ಅವರಿಗೆ ತಿಳಿದು ಈ ತಿಂಗಳ 22 ರಂದು ನಾರ್ಕಟಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್‌ ತನಿಖೆ ವೇಳೆ ಇದೇ 22ರಂದು ಸಂಜೆ ಹರಿ ಫೋನ್ ಸ್ವಿಚ್ ಆಫ್ ಆಗಿದ್ದಾಗಿ ತಿಳಿದಿದೆ. ಏತನ್ಮಧ್ಯೆ, ಹರಿ ಶುಕ್ರವಾರ (ಫೆಬ್ರವರಿ 24) ರಾತ್ರಿ ಅಬ್ದುಲ್ಲಾಪುರಮೆಟ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಹುಡುಗಿ ವಿಚಾರವಾಗಿ ಜಗಳವಾಗಿ ನವೀನ್ ಕೊಲೆಮಾಡಿ ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಶವವನ್ನು ಎಸೆದಿದ್ದಾಗಿ ತಪ್ಪೊಪ್ಪೊಕೊಂಡಿದ್ದಾನೆ.

ಈ ಕೊಲೆ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಹರಿಹರ ಕೃಷ್ಣ ಸೈಕೋ ಎಂದು ಪೊಲೀಸರು ಹೇಳಿದ್ದಾರೆ. ನವೀನ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಈ ಬಗ್ಗೆ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಗೆ ಕಳುಹಿಸಿದ ಸಂದೇಶದಲ್ಲಿ, ಇದು ನಿನ್ನನ್ನು ಮುಟ್ಟಿದ ಬೆರಳು..ಇದೇ ಫೋಟೋ ಎಂದು ನವೀನ್ ಬೆರಳನ್ನು ಕತ್ತರಿಸಿದ ಫೋಟೋ ಕಳಿಸಿದ್ದಾನೆ. ಈ ತುಟಿಗಳು ನಿನ್ನನ್ನು ಚುಂಬಿಸಿದವು ಎಂದು ತುಟಿಗಳನ್ನು ಕತ್ತರಿಸಿದ್ದಾನೆ. ನವೀನ್ ಹೃದಯ ಕಿತ್ತು ಫೋಟೋ ಕೂಡ ಕಳಿಸಿದ. ಕೊನೆಗೆ ನವೀನ್ ತಲೆ ಕತ್ತರಿಸಿ ಎಸೆದಿದ್ದಾನೆ. ಬಳಿಕ ನವೀನ್ ಮರ್ಮಾಂಗಕ್ಕೂ ಕತ್ತರಿ ಹಾಕಿರುವ ವಿಷಯ ತಿಳಿದು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!