ಹೊಸ ದಿಗಂತ ವರದಿ, ಹಾವೇರಿ:
ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಹಾವೇರಿ ನಗರ ಮಂಡಲದ ವತಿಯಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜು ಕಲಕೋಟಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದ ಹಪಾಪಿತನಕ್ಕಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನಾಶವಾಗುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದು ಇದು ಕಾಂಗ್ರೆಸ್ಸಿನ ದಿವಾಳಿತನಕ್ಕೆ ಹಿಡಿದಿರುವ ಕೈಗನ್ನಡಿ ಎಂದು ಹೇಳಿದರು.
ಮಂಗಳೂರಿನಲ್ಲಿ ನಡೆದಂತಹ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೂಲತಃ ಗುಂಡಾ ಸಂಸ್ಕೃತಿಯವರಾಗಿದ್ದು ಭಯೋತ್ಪಾದನೆಯನ್ನು ಬೆಂಬಲಿಸುವುದು ಅವರಿಗೆ ರಕ್ತಗತವಾಗಿ ಬಂದಿದೆ ಎಂದು ಟೀಕಿಸಿದರು.
ದೇಶದ ಆಂತರಿಕ ಭದ್ರತೆಯ ಬಗ್ಗೆ ಮತ್ತು ಗಡಿ ಭದ್ರತೆಯ ಬಗ್ಗೆ ಅಸಡ್ಡೆಯನ್ನು ಹೊಂದಿರುವಂತಹ ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತ ಮತ ಓಲೈಕೆಗಾಗಿ ಭಯೋತ್ಪಾದಕರನ್ನು ಬೆಂಬಲಿಸುವ ದೇಶ ದ್ರೋಹದ ಕಾರ್ಯಕ್ಕೆ ಕೈ ಹಾಕಿದೆ ಎಂದು ದೂರಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ ಹಾಗೂ ರುದ್ರೇಶ ಚಿನ್ನಣ್ಣನವರ, ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಜಿಲ್ಲಾ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ಮಂಜುನಾಥ ತಾಂಡೂರ, ಬಸವರಾಜ ಕೋಳಿವಾಡ, ಶ್ರೀಕಾಂತ ಪೂಜಾರ, ಬಾಬುಸಾಬ ಮೋಮಿನಗಾರ, ಶಿವರಾಜ ಮತ್ತಿಹಳ್ಳಿ, ಜಗದೀಶ ಕನವಳ್ಳಿ, ಶಿವಬಸವ ಚೌಶಟ್ಟಿ, ಚನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ, ಭಾಗ್ಯಶ್ರೀ ಮೋರೆ, ಸಂಜನಾ ಮೋರೆ, ವೈಶಾಟi ಕರಿಸಿದ್ದೇವರಮಠ, ಹೊನ್ನಪ್ಪ ಮಾಳಗಿ, ಈರಣ್ಣ ಪಟ್ಟಣಶೆಟ್ಟಿ, ಅಭಿಷೇಕ ಬ್ಯಾಡಗಿ, ಪ್ರಶಾಂತ ಕೋಡಿತ್ಕರ, ನೀಖಿಲ ಡೊಗ್ಗಳ್ಳಿ, ದಯಾನಂದ ಭಜಂತ್ರಿ, ಪರಶುರಾಮ ಹರಿಜನ, ಫಕ್ಕಿರೇಶ ಹಾವನೂರ, ವೆಂಕಟೇಶ ಇಟಗಿ, ಅಸ್ಲಾಂ ಲಿಂಗದಹಳ್ಳಿ, ಅಲ್ತಾಪ ಬೋರಗಲ್, ಮೆಹಬೂಬಲಿ ನಾರಂಗಿ, ಮಾಲತೇಶ ಗೌರಮ್ಮನವರ, ಶಾಹಿಬಜಾನ ಹುಮನಬಾದಿ, ರಾಜು ಕನವಳ್ಳಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.