ಹೊಸದಿಗಂತ ಡಿಜಿಟಲ್ ಡೆಸ್ಕ್;
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ.
ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಗರ್ಭಿಣಿಯಾಗಿದ್ದು, ಹೊಸ ಅತಿಥಿಯನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ ಸುಮಲತಾ ಅಂಬರೀಶ್ ಕುಟುಂಬಸ್ಥರು.
ಇದೇ ವಾರ ಅದ್ದೂರಿಯಾಗಿ ಸೀಮಂತ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಈ ಕುರಿತಾಗಿ ಕುಟುಂಬಸ್ಥರು ಯಾವುದೇ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಅಭಿಷೇಕ್ ಕಿಕ್ ಬಾಕ್ಸಿಂಗ್ ಕಲಿಯೋಕೆ ವಿದೇಶಕ್ಕೆ ಹೋಗಿದ್ದಾರೆ. ಮುಂದಿನ ಚಿತ್ರಕ್ಕೆ ಕಿಕ್ ಬಾಕ್ಸಿಕ್ ಕಲಿಯುತ್ತಿದ್ದಾರೆ. ಅಭಿ ನಾಳೆ ಬೆಂಗಳೂರಿಗೆ ವಾಪಸ್ಸಾಗಲಿದ್ದು, ಇದೇ ವಾರ ಅದ್ದೂರಿಯಾಗಿ ಅಂಬಿ ನಿವಾಸದಲ್ಲಿ ಸೀಮಂತ ಕಾರ್ಯ ನೇರವೇರಲಿದೆ ಎನ್ನಲಾಗಿದೆ.
ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಪುತ್ರ, ನಟ ಅಭಿಷೇಕ್ ಹಾಗೂ ಫ್ಯಾಷನ್ ಉದ್ಯಮಿ ಅವಿವಾ ಬಿದ್ದಪ್ಪ ಮದುವೆ ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಅಭಿಷೇಕ್ ಅಂಬರೀಷ್ ಅವರನ್ನು ವಿವಾಹವಾಗಿರುವ ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ.