ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹುಟ್ಟುಹಬ್ಬಕ್ಕೆ ಅಭಿಷೇಕ್ ಬಚ್ಚನ್ ಸರ್‌ಪ್ರೈಸ್ ನೀಡಿದ್ದಾರೆ. ಬಿಗ್‌ಬಿ ಇಷ್ಟದ ಕೆಬಿಸಿ ಸೆಟ್‌ನಲ್ಲಿಯೇ ಹುಟ್ಟುಹಬ್ಬ ಆಚರಿಸಿದ್ದು, ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಈ ಎಪಿಸೋಡ್ ಇನ್ನೂ ಟೆಲಿಕಾಸ್ಟ್ ಆಗಿಲ್ಲ. ಆದರೆ ಯಾವ ರೀತಿ ತಯಾರಿ ಮಾಡಲಾಯ್ತು ಎಂದು ಅಭಿಷೇಕ್ ಹೇಳಿದ್ದಾರೆ.
ತಂದೆ ಬಗ್ಗೆ ಹೇಳುವುದಕ್ಕೆ ಮಾತುಗಳಿಲ್ಲ, ಅವರ ಶಕ್ತಿ ಎಲ್ಲವನ್ನೂ ಮೀರಿದ್ದು, ತುಂಬಾ ಪ್ಲಾನಿಂಗ್ ನಂತರ ಈ ಸರ್‌ಪ್ರೈಸ್ ಜಾರಿಗೆ ಬಂತು. ರಿಹರ್ಸಲ್ಸ್ ಕೂಡ ಮಾಡಿದೆ. ಆದರೆ ಅಪ್ಪನಿಗೆ ಎಷ್ಟು ಮಾಡಿದರೂ ಸಾಲದು, ಅಷ್ಟು ಪ್ರೀತಿ ಅವರ ಮೇಲಿದೆ. ಈ ಒಳ್ಳೆ ಅವಕಾಶಕ್ಕೆ ಸೋನಿ ಅವರಿಗೆ ಧನ್ಯವಾದ ಹೇಳುತ್ತೇನೆ. ಇಂದಿನ ಎಪಿಸೋಡ್ ಯಾವಾಗಲೂ ಅಪ್ಪನಿಗೆ ನೆನಪಿರುತ್ತದೆ ಎಂದಿದ್ದಾರೆ.