ತಿರುಮಲದಲ್ಲಿ ಭಕ್ತರ ನಡುವೆ ಘರ್ಷಣೆ: ಗುಂಟೂರಿನ ಭಕ್ತರ ಮೇಲೆ ತಮಿಳುನಾಡು ಭಕ್ತರಿಂದ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಮಲದಲ್ಲಿ ಭಕ್ತರ ಸಂಖ್ಯೆ ಮಿತಿ ಮೀರಿದೆ. ಎಲ್ಲಿ ನೋಡಿದ್ರೂ ಜನವೋ ಜನ. ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಎರಡು ಗುಂಪಿನ ಭಕ್ತರ ನಡುವೆ ಘರ್ಷಣೆ ನಡೆದಿದ್ದು, ದಾಳಿಯ ಬಗ್ಗೆ ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನ ಹೊರಗಿನ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ ದರ್ಶನಕ್ಕೆ ತೆರಳುತ್ತಿದ್ದ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿದೆ. ಒಬ್ಬರನ್ನೊಬ್ಬರು ಮುಂದೆ ಮತ್ತು ಹಿಂದೆ ತಳ್ಳಿದ್ದರಿಂದ ಜಗಳ ಪ್ರಾರಂಭವಾಯಿತು. ಈ ಜಗಳ ತಮಿಳುನಾಡು ಮತ್ತು ಗುಂಟೂರಿನ ಭಕ್ತರ ನಡುವೆ ಮಾರಾಮಾರಿಗೆ ಕಾರಣವಾಗಿದೆ.

ನಿತ್ಯವೂ ಗೋವಿಂದನ ನಾಮಸ್ಮರಣೆ ನಡೆಯುವ ಸ್ಥಳದಲ್ಲಿ ಈ ರೀತಿಯ ಗಲಾಟೆ ಇತರ ಭಕ್ತರಿಗೂ ಸಾಕಷ್ಟು ತೊಂದರೆಯಾಗಿದೆ. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಗುರುತಿಸಿ ಹೊರಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಭಕ್ತಾದಿಗಳು ತಾಳ್ಮೆ ಕಳೆದುಕೊಂಡು ಈ ರೀತಿ ವರ್ತನೆ ಮಾಡುವುದರಿಂದ ಸಹ ಭಕ್ತರಿಗೆ ತೊಂದರೆಯಾಗುತ್ತದೆ ಎಲ್ಲರೂ ಶಾಂತಿಯಿಂದ ವರ್ತಿಸಬೇಕೆಂದು ಟಿಟಿಡಿ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!