ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿ ಹಬ್ಬಿದ ಬೆನ್ನಲ್ಲೇ ಇದೀಗ ಅಭಿಷೇಕ್ ಸಹೋದರಿ ಐಶ್ವರ್ಯಾಗಿಂತ ಅಭಿಷೇಕ್ ಬೆಸ್ಟ್ ಆಕ್ಟರ್ ಎಂದು ಹೇಳಿದ್ದಾರೆ.
ಕಾಫಿ ವಿತ್ ಕರಣ್ ಶೋನಲ್ಲಿ ಹೆಚ್ಚು ವಿವಾದಗಳು ಹುಟ್ಟುತ್ತವೆ, ಅಭಿಷೇಕ್ ಹಾಗೂ ಶ್ವೇತಾ ಬಚ್ಚನ್ ಶೋಗೆ ಆಗಮಿಸಿದಾಗ ಯಾರು ಬೆಸ್ಟ್ ಆಕ್ಟರ್ ಅಭಿಷೇಕ್ ಅಥವಾ ಐಶ್ವರ್ಯಾ ಎನ್ನುವ ಪ್ರಶ್ನೆಯನ್ನು ಕರಣ್ ಕೇಳಿದ್ದಾರೆ. ಒಂದು ನಿಮಿಷವೂ ಸಮಯ ತೆಗೆದುಕೊಳ್ಳದೆ ಶ್ವೇತಾ ಅಭಿಷೇಕ್ ಬಚ್ಚನ್ ಉತ್ತಮ ನಟ ಎಂದು ಹೇಳಿದ್ದಾರೆ. ಇದು ಐಶ್ವರ್ಯಾ ಫ್ಯಾನ್ಸ್‌ಗೆ ಇಷ್ಟವಾಗಿಲ್ಲ.
ಇನ್ನು ಐಶ್ವರ್ಯಾ ಬಗ್ಗೆ ನಿಮಗೆ ಇಷ್ಟ ಇಲ್ಲದ ಹಾಗೂ ಇಷ್ಟ ಇರುವ ಒಂದು ವಿಷಯ ಹೇಳಿ ಎಂದು ಕರಣ್ ಕೇಳಿದ್ದಾರೆ. ಇದಕ್ಕೆ ಶ್ವೇತಾ, ಐಶ್ವರ್ಯಾಗೆ ನಾನು ಫೋನ್ ಮಾಡಿದರೆ ಕೆಲವೊಮ್ಮೆ ರಿಸೀವ್ ಮಾಡೋದಿಲ್ಲ, ಮತ್ತೆ ಫೋನ್ ಮಾಡೋದಕ್ಕೆ ತುಂಬಾ ಸಮಯ ತೆಗೆದುಕೊಳ್ತಾರೆ ಇದು ನನಗೆ ಇಷ್ಟವಾಗೋದಿಲ್ಲ. ಇನ್ನು ಆಕೆ ಸ್ಟ್ರಾಂಗ್ ವುಮೆನ್, ಅದ್ಭುತವಾದ ತಾಯಿ ಅನ್ನೋದು ಇಷ್ಟದ ವಿಷಯ ಎಂದಿದ್ದಾರೆ.