BIG NEWS | ಜ್ಞಾನವಾಪಿ ಕೇಸ್: ಮುಸ್ಲಿಂ ಪರ ಸಲ್ಲಿಕೆ ಆಗಿದ್ದ ಐದೂ ಅರ್ಜಿಗಳು ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜ್ಞಾನವಾಪಿ ಮಸೀದಿಯೊಳಗೆ ಪತ್ತೆಯಾಗಿದ್ದ ಹಿಂದೂ ದೇವರ ರೂಪದ ವಿಗ್ರಹಗಳಿಗೆ ಪೂಜೆ ಹಾಗೂ ಎಎಸ್‌ಐ ಸರ್ವೆ ಪ್ರಶ್ನಿಸಿ ಮುಸ್ಲಿಮರು ಸಲ್ಲಿಸಿದ್ದ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಹಿಂದೂ ಸಮುದಾಯಕ್ಕೆ ಜಯವಾಗಿದೆ. ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಮರುಸ್ಥಾಪಿಸುವ ಬಗ್ಗೆ ಹಿಂದೂ ಸಮುದಾಯ ಸಲ್ಲಿಸಿದ್ದ ಅರ್ಜಿಯನ್ನು ಹಾಗೂ ಬಾಕಿ ಉಳಿದಿರುವ ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಹಾಗೂ ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿ ಅಲಹಾಬಾದ್ ಕೋರ್ಟ್‌ನಲ್ಲಿ ವಜಾ ಆಗಿದೆ.

ಐದು ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿದ್ದು, ಹಿಂದೂ ಕಡೆಯವರು ಸಲ್ಲಿಸಿರುವ ಸಿವಿಲ್ ಮೊಕದ್ದಮೆ ವಿಚಾರಣೆಗೆ ಅರ್ಹವೆಂದು ಹೈಕೋರ್ಟ್ ತಿಳಿಸಿದೆ.

ಜ್ಞಾನವಾಪಿ ಮಸೀದಿಯ ಸಮಗ್ರ ಸಮೀಕ್ಷೆಯನ್ನು ನಡೆಸುವಂತೆ ವಾರಣಾಸಿ ಜಿಲ್ಲಾ ಕೋರ್ಟ್ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಅಲಹಾಬಾದ್ ಕೋರ್ಟ್ ಅರ್ಜಿ ವಜಾ ಮಾಡಿದ್ದು, ಇನ್ನು ಆರು ತಿಂಗಳಿನಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಜಿಲ್ಲಾ ಕೋರ್ಟ್‌ಗೆ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!