ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿರುವ 5ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸಿಡಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡಕ್ಕೆ 248ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಅಭಿಷೇಕ್ ಶರ್ಮಾ ಸಿಡಿಸಿದ ಶತಕದ ನೆರವಿನಿಂದ ಬೃಹತ್ ಮೊತ್ತ ಕಲೆಯಾಕಿತು. ಶರ್ಮಾ 54 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್ಗಳ ನೆರವಿನಿಂದ 135 ರನ್ಗಳಿಸಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 2ನೇ ಓವರ್ನಲ್ಲೇ ಸಂಜು ಸ್ಯಾಮ್ಸನ್ (16) ವಿಕೆಟ್ ಕಳೆದುಕೊಂಡಿತು. ತಿಲಕ್ ವರ್ಮಾ 15 ಎಸೆತಗಳಲ್ಲಿ 24 ರನ್ಗಳಿಸಿದರು.
ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ (2) ಮತ್ತೊಮ್ಮೆ ವಿಫಲರಾದರು. ರಿಂಕು ಸಿಂಗ್ (9), ಹಾರ್ದಿಕ್ ಪಾಂಡ್ಯ (9) ವಿಫಲರಾದರು. ಅಕ್ಷರ್ ಪಟೇಲ್ (15) ಮಾತ್ರ ಅಭಿಷೇಕ್ ಜೊತೆಗೆ 30 ರನ್ ಜೊತೆಯಾಟ ನಡೆಸಿದರು.