ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ಲಾಮಿಕ್ ಸ್ಟೇಟ್ ಜಿಹಾದಿ ಉಗ್ರ ಸಂಘಟನೆಯ ನಾಯಕ ಅಬು ಹಸನ್ ಅಲ್ ಹಷ್ಮಿ ಅಲ್-ಕುರೇಷಿ ಯುದ್ಧದಲ್ಲಿ ಮೃತಪಟ್ಟಿದ್ದು, ಹೊಸ ಮುಖ್ಯಸ್ಥನನ್ನು ನೇಮಕ ಮಾಡಲಾಗಿದೆ.
ಶತ್ರುಗಳೊಡನೆ ಹೋರಾಡಿ ನಮ್ಮ ನಾಯಕ ಮರಣಹೊಂದಿದ್ದಾರೆ ಎಂದು ಉಗ್ರ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ. ಅಬು ಅಲ್ ಹುಸೇನ್ ಅಲ್ ಹುಸೇನಿ ಅಲ್ ಕುರೇಶಿಯನ್ನು ಹೊಸ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಕುರೇಷಿ ಎನ್ನುವ ಪದ ಪ್ರವಾದಿ ಮೊಹಮ್ಮದ್ರ ಬುಡಕಟ್ಟಿಗೆ ಸಂಬಂಧಿಸಿದ ಹೆಸರಾಗಿದ್ದು, ಈ ಮೂಲಕ ಐಸಿಸ್ ನಾಯಕರು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ.