ಹೊಸದಿಗಂತ ವರದಿ ಹಾವೇರಿ:
ಅಧಿಕಾರ ದುರ್ಬಳಕೆ ಆರೋಪದ ಮೇಲೆ ಶಿಗ್ಗಾಂವದಲ್ಲಿ ಮನೆ ಹೊಂದಿರುವ ಡಿ.ಎಂ. ಪಾಟೀಲ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಧಾರವಾಡದ ಕೆಐಎಡಿಬಿಯಲ್ಲಿ ಅಧಿಕಾರಿ ಆಗಿದ್ದ ವೇಳೆ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಡಿ.ಎಂ.ಪಾಟೀಲ್ ವಿರುದ್ಧ ಧಾರವಾಡ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಸ್ತುತ ರಾಣೇಬೆನ್ನೂರಿನ ಆಹಾರ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ ಡಿ.ಎಂ.ಪಾಟೀಲ್ ಅವರ ಶಿಗ್ಗಾಂವ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ
ಸತತ ಎರಡು ಗಂಟೆಗಳ ಕಾಲ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.