2025 ಅಕ್ಟೋಬರ್ ನಿಂದ ಟ್ರಕ್ ಗಳಿಗೆ AC ಕ್ಯಾಬಿನ್ ಕಡ್ಡಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಕ್ಟೋಬರ್ 1, 2025 ರಿಂದ ಅಥವಾ ನಂತರ ತಯಾರಾದ ಎಲ್ಲಾ ಹೊಸ ಟ್ರಕ್‌ ಗಳು ಚಾಲಕರಿಗೆ ಎಸಿ(ಹವಾನಿಯಂತ್ರಿತ) ಕ್ಯಾಬಿನ್‌ ಗಳನ್ನು ಹೊಂದಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.

ಗೆಜೆಟ್‌ ಅಧಿಸೂಚನೆಯಲ್ಲಿ ಸಚಿವಾಲಯವು ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಿಸಿದ ವಾಹನಗಳು, N2 ಮತ್ತು N3 ವರ್ಗದ ವಾಹನಗಳ ಕ್ಯಾಬಿನ್‌ಗೆ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಸಚಿವಾಲಯವು ಹೇಳಿದೆ.ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಅಳವಡಿಸಲಾಗಿರುವ ಕ್ಯಾಬಿನ್‌ನ ಪರೀಕ್ಷೆಯು IS14618:2022 ರ ಪ್ರಕಾರ ಇರಬೇಕು ಎಂದು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.

ಈ ವರ್ಷದ ಜುಲೈನಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಟ್ರಕ್‌ಗಳ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ದರು.

ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಸಾರಿಗೆ ಕ್ಷೇತ್ರದಲ್ಲಿ ಟ್ರಕ್‌ ಚಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅವರ ಕೆಲಸದ ಪರಿಸ್ಥಿತಿಗಳು ಹಾಗೂ ಮನಸ್ಥಿತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಅವಶ್ಯಕತೆಯಿದೆ. ಟ್ರಕ್‌ಗಳಿಗೆ ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ಶೀಘ್ರದಲ್ಲೇ ಕಡ್ಡಾಯಗೊಳಿಸಲಾಗುವುದು ಎಂದು ಗಡ್ಕರಿ ಅವರು ಇತ್ತೀಚೆಗೆ ತಿಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!