ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯ ನಟ ರೆಡಿನ್​ ಕಿಂಗ್ಸ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ತಮಿಳು ಚಿತ್ರರಂಗದ ಹಾಸ್ಯ ನಟ ರೆಡಿನ್​ ಕಿಂಗ್ಸ್ಲಿಚೆನ್ನೈ ಮೂಲದ ಕಿರುತೆರೆ ಕಲಾವಿದೆ ಸಂಗೀತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುಟುಂಬಸ್ಥರು ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಭಾನುವಾರ ಹೊಸ ಜೀವನ ಆರಂಭಿಸಿದ್ದಾರೆ.

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವಿವಾಹಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್​ ಆಗುತ್ತಿವೆ. ಅಭಿಮಾನಿಗಳು ನವದಂಪತಿಗೆ ವೈವಾಹಿಕ ಜೀವನಕ್ಕೆ ಶುಭಾಶಯ ಕೋರುತ್ತಿದ್ದಾರೆ.

ತಮ್ಮದೇ ಶೈಲಿಯ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ರೆಡಿನ್​ ಕಿಂಗ್ಸ್ಲಿ, ಇತ್ತೀಚೆಗೆ ತೆರೆ ಕಂಡ ‘ಜೈಲರ್​’ ಸಿನಿಮಾದ ಮೂಲಕ ಸಿನಿ ಪ್ರೇಮಿಗಳಿಗೆ ಮತ್ತಷ್ಟು ಹತ್ತಿರವಾದರು. ಈ ಚಿತ್ರದಲ್ಲಿ ತಮ್ಮ ಕಾಮಿಡಿ ಟೈಮಿಂಗ್​ ಮೂಲಕ ನೋಡುಗರನ್ನು ರಂಜಿಸಿದರು. ಲೇಡಿ ಸೂಪರ್​ಸ್ಟಾರ್​ ನಯನತಾರಾ ಮುಖ್ಯಭೂಮಿಕೆಯ ತಮಿಳು ಸಿನಿಮಾ ‘ಕೋಲಮೌ ಕೋಕಿಲಾ’ ಮೂಲಕ ಹಾಸ್ಯ ನಟನಾಗಿ ರೆಡಿನ್​ ಕಿಂಗ್ಸ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು.

ದಳಪತಿ ವಿಜಯ್​ ಅವರ ‘ಬೀಸ್ಟ್​’, ವಿಜಯ್​ ಸೇತುಪತಿ ನಟನೆಯ ‘ಕಥುವಕುಲ ರಂಡು ಕಾದಲ್​’ ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳಿಂದಾಗಿ ರೆಡಿನ್​ ಕಿಂಗ್ಸ್ಲಿ ಭಾರತದಾದ್ಯಂತ ಖ್ಯಾತರಾಗಿದ್ದಾರೆ. ‘ಜೈಲರ್​’ ಸಿನಿಮಾದಿಂದ ವಿಶ್ವದಾದ್ಯಂತ ತಮ್ಮ ನಗೆ ಚಟಾಕಿಯನ್ನು ಹಾರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!