ಹೊಸದಿಗಂತ ವರದಿ ಹಾವೇರಿ:
ಐವತ್ತೈದು ಸಾವಿರರೂ ಲಂಚ ಪಡೆಯುತ್ತಿದ್ದ ವೇಳೆ ಮಹಿಳಾ ಪಿಡಿಓ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಇಲ್ಲಿಗೆ ಸಮೀಪದ ಆಲದಕಟ್ಟಿ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ನಡೆದಿದೆ.
ಎಸಿಬಿ ಬಲೆಗೆ ಬಿದ್ದಿರುವ ಪಿಡಿಓ ಸವಿತಾ ಯರೆಸೀಮೆ ಎಂದು ತಿಳಿದು ಬಂದಿದೆ.
ಪ್ಲಾಟುಗಳ ಖಾತೆ ಬದಲಾವಣೆಗೆ ಹಾವೇರಿ ನಗರದ ನಿವಾಸಿ ಮುರುಗೇಶ ಎಂಬುವರಿಂದ ಐವತ್ತೈದು ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದ ವೇಳೆ ಸವಿತಾ ಅವರು ಎಸಿಬಿ ಬಲೆಗೆ ಸಾಕ್ಷಿ ಸಮೇತವಾಗಿ ಸಿಕ್ಕು ಬಿದ್ದಿದ್ದಾರೆ. ಎಸಿಬಿ ದಾಳಿಯಲ್ಲಿ ಎಸಿಬಿ ಡಿವೈಎಸ್ಪಿ ಗೋಪಿ.ಬಿ.ಆರ್, ಸಿಪಿಐಗಳಾದ ಬಸವರಾಜ ಬುದ್ನಿ, ಪ್ರಭಾವತಿ ಶೇತಸನದಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.