ಚಂದ್ರಬಾಬುಗೆ ಮತ್ತೊಮ್ಮೆ ಹಿನ್ನೆಡೆ: ಎರಡು ದಿನ ರಿಮಾಂಡ್ ವಿಸ್ತರಿಸಿದ ಎಸಿಬಿ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡುಗೆ ಎಸಿಬಿ ನ್ಯಾಯಾಲಯದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ನ್ಯಾಯಾಧೀಶರು ಚಂದ್ರಬಾಬು ಅವರ ಬಂಧನ ಅವಧಿಯನ್ನು ಮತ್ತೆರಡು ಎರಡು ದಿನಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಿದರು.

ಇದರಿಂದ ಅಸಮಾಧಾನಗೊಂಡ ಚಂದ್ರಬಾಬು ನಾಯ್ಡು, ನ್ಯಾಯಾಧೀಶರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಕಾನೂನಿನಡಿ ಎಲ್ಲರೂ ಸಮಾನರು.. ನಾನು ಕಾನೂನನ್ನು ಗೌರವಿಸುತ್ತೇನೆ ಆದರೆ ತಪ್ಪಾಗಿದ್ದರೆ ತನಿಖೆ ನಡೆಸಿ ಬಂಧಿಸಬೇಕು. ಅದುಬಿಟ್ಟು ಹೀಗೆ ಅನ್ಯಾಯವಾಗಿ ಬಂಧಿಸಲಾಗಿದೆ ಎಂದರು.

ನನಗೆ 45 ವರ್ಷಗಳ ಸುದೀರ್ಘ ರಾಜಕೀಯ ಜೀವನವಿದೆ.. ನೋಟಿಸ್ ಕೂಡ ನೀಡದೆ ಬಂಧಿಸಿರುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾನೂನಿನ ಮುಂದೆ ಎಲ್ಲರೂ ಸಮಾನರು.. ನಾನು ಕಾನೂನನ್ನು ಗೌರವಿಸುತ್ತೇನೆ.. ತಪ್ಪಿತಸ್ಥನಾಗಿದ್ದರೆ ತನಿಖೆ ನಡೆಸಿ ಬಂಧಿಸಬೇಕು.. ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನನ್ನನ್ನು ಬಂಧಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದು ನನ್ನ ನೋವು, ನನ್ನ ಸಂಕಟ, ಇವೆಲ್ಲವೂ ನನ್ನ ವಿರುದ್ಧದ ಆರೋಪಗಳು ಮಾತ್ರ, ದೃಢಪಟ್ಟಿಲ್ಲ ಎಂಬುದನ್ನು ಗುರುತಿಸುವಂತೆ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!