Friday, December 8, 2023

Latest Posts

CINE | ರಶ್ಮಿಕಾಗೆ ಯಾವಾಗಿನಿಂದಲೂ ದೊಡ್ಡ ಕನಸಿತ್ತು, ಎಕ್ಸ್ ಬಗ್ಗೆ ರಕ್ಷಿತ್ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಮತ್ತೆ ಜನರ ಮನದಾಳಕ್ಕೆ ಇಳಿದಿದ್ದಾರೆ.
ಸಿಂಪಲ್ ಆದ ಕಥೆಯಲ್ಲಿಯೇ ಅದ್ಭುತ ನಟನೆಯಿಂದ ಜನರ ಮನ ಗೆದ್ದಿದ್ದಾರೆ. ಇದೀಗ ಸಿನಿಮಾ ತೆಲುಗುವಿನಲ್ಲಿ ರಿಲೀಸ್ ಆಗಲಿದ್ದು, ರಕ್ಷಿತ್ ಭರ್ಜರಿ ಪ್ರಚಾರ ಮಾಡ್ತಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಭಾರೀ ಮಿಂಚಿದ ರಶ್ಮಿಕಾ ರಕ್ಷಿತ್ ಎಕ್ಸ್‌ಗರ್ಲ್‌ಫ್ರೆಂಡ್ ಅನ್ನೋ ವಿಚಾರ ಗೊತ್ತಿರೋದೇ, ಸಹಜವಾಗಿ ಎಲ್ಲಿ ಹೋದ್ರೂ ರಕ್ಷಿತ್‌ಗೆ ರಶ್ಮಿಕಾ ಬಗೆಗಿನ ಪ್ರಶ್ನೆಗಳೇ ಎದುರಾಗಿವೆ.

ರಶ್ಮಿಕಾ ಕಾಂಟಾಕ್ಟ್‌ನಲ್ಲಿ ಇದ್ದಾರಾ ಎನ್ನುವ ಪ್ರಶ್ನೆ ಎದುರಾಗಿದ್ದು, ರಕ್ಷಿತ್ ಘನತೆಯಿಂದ ಉತ್ತರಿಸಿದ್ದಾರೆ. ಹೌದು, ರಶ್ಮಿಕಾ ಜೊತೆ ಕಾಂಟಾಕ್ಟ್‌ನಲ್ಲಿ ಇದ್ದೇನೆ. ರಶ್ಮಿಕಾಗೆ ಸದಾ ದೊಡ್ಡ ಕನಸ್ಸಿತ್ತು, ಕನಸ್ಸನ್ನೇ ಜೀವಿಸ್ತಾ ಇದ್ದಾರೆ, ಇದೀಗ ಆಕೆ ದೊಡ್ಡ ಸ್ಟಾರ್, ಅವರಿಗೆ ಇನ್ನೂ ಒಳ್ಳೆಯದಾಗಲಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!