ಉದ್ಯೋಗಿಗಳಿಗೆ ಶಾಕ್ ಕೊಟ್ಟ ದೈತ್ಯ ಐಟಿ ಕಂಪನಿ: ಸಾವಿರಾರು ಮಂದಿ ಕೆಲಸದಿಂದ ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಟಿ ದಿಗ್ಗಜ ಆಕ್ಸೆಂಚರ್ ತನ್ನಯ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿ ಶಾಕ್‌ ನೀಡಿದೆ. ಆಕ್ಸೆಂಚರ್ ಇಂಡಿಯಾ ಘಟಕವು ತಮ್ಮ ಅನೇಕ ಉದ್ಯೋಗಿಗಳಿಗೆ ನಕಲಿ ದಾಖಲೆಗಳು ಮತ್ತು ನಕಲಿ ಅನುಭವ ಪತ್ರಗಳನ್ನು ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂಬ ಸಾಕ್ಷ್ಯಗಳ ಆಧಾರದ ಮೇಲೆ ಉದ್ಯೋಗಿಗಳನ್ನು ವಜಾಗೊಳಿಸಿದೆ.

ನಮ್ಮ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಕ ಕಂಪನಿಗಳು ಅನುಭವ ಪತ್ರಗಳು ಹಾಗೂ ನಕಲಿ ದಾಖಲೆಗಳನ್ನು ಒದಗಿಸಿವೆ. ಅಂತಹವರನ್ನು ತೆಗೆದುಹಾಕಿದ್ದೇವೆ. ಈ ಮೂಲಕ ನಮ್ಮ ಗ್ರಾಹಕರಿಗೆ ನಮ್ಮ ಸೇವೆಗಳು ಪರಿಣಾಮ ಬೀರದಂತೆ ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕಂಪನಿ ಹೇಳಿದೆ.

ನಿಯಮಗಳನ್ನು ಉಲ್ಲಂಘಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಅನುಭವ ಪತ್ರಗಳನ್ನು ನೀಡಿ ಕಂಪನಿಗೆ ವಂಚನೆ ಮಾಡಿದ್ದಾರೆ.  ಕಂಪನಿ ತತ್ವಗಳನ್ನು ಉಲ್ಲಂಘಿಸುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸೂಕ್ತ ಅರ್ಹ ಅಭ್ಯರ್ಥಿಗಳನ್ನು ಸ್ವತಃ ಅವರೇ ನೇಮಕ ಮಾಡಿಕೊಳ್ಳಲಿದ್ದು, ಆ ನಿಟ್ಟಿನಲ್ಲಿ ಕಾಲ ಕಾಲಕ್ಕೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ. ಕರೋನಾ ಅವಧಿಯಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಯಿತು ಆ ಸಮಯದಲ್ಲಿಯೇ ಅನೇಕರು ನಕಲಿ ಪ್ರಮಾಣಪತ್ರಗಳ ಮೂಲಕ ಕಂಪನಿಗೆ ಬಂದಿದ್ದಾರೆ ಎಂದು ದೂರಿದರು.

ಕಳೆದ ಕೆಲವು ದಿನಗಳಿಂದ ಐಟಿ ಕ್ಷೇತ್ರ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆ್ಯಪಲ್, ಗೂಗಲ್, ಫೇಸ್ ಬುಕ್ ನ ಮಾತೃಸಂಸ್ಥೆ ಮೆಟಾ ಮುಂತಾದ ಕಂಪನಿಗಳು ಈಗಾಗಲೇ ಕೋಟ್ಯಂತರ ರೂ. ಆದಾಯ ತೀವ್ರವಾಗಿ ಕುಸಿದಿದೆ. ಇದರ ಭಾಗವಾಗಿ, ವೆಚ್ಚವನ್ನು ಕಡಿಮೆ ಮಾಡಲು ನೌಕರರನ್ನು ವಜಾಗೊಳಿಸಲಾಗುತ್ತಿದೆ. ಇದು ಭಾರತದ ಮೇಲೂ ಪರಿಣಾಮ ಬೀರುತ್ತಿದೆ. ಇಲ್ಲಿನ ಐಟಿ ಕಂಪನಿಗಳೂ ಅದೇ ಹಾದಿಯಲ್ಲಿ ಸಾಗುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!