Friday, June 2, 2023

Latest Posts

ಪರಿಹಾರದ ಜೊತೆಗೆ 19,000 ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಡಲು ಮುಂದಾದ ಅಕ್ಸೆಂಚರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಟಿ ಕಂಪನಿಗಳಲ್ಲಿ ಒಂದಾದ ಅಕ್ಸೆಂಚರ್ (IT company Accenture) ಸುಮಾರು 19,000 ಮಂದಿಯನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಾಗಿ ತಿಳಿಸಿದೆ. ಅಂದರೆ ಅಕ್ಸೆಂಚರ್​ನಿಂದ ಶೇ. 2.5ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

7 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಅಕ್ಸೆಂಚರ್ ರ್ಧಕ್ಕಿಂತ ಹೆಚ್ಚಿನ ಮಂದಿ ನಾನ್ ಬಿಲ್ಲಬಲ್ ಕಾರ್ಪೊರೇಟ್ ಫಂಕ್ಷನ್​ನಲ್ಲಿರುವ (Non-billable corporate function) ಉದ್ಯೋಗಿಗಳಿಗೆ ವಿಗೇಟ್ ಪಾಸ್ ಕೊಡಲು ಮುಂದಾಗಿದೆ. . ನಾನ್ ಬಿಲ್ಲಬಲ್ ಎಂದರೆ ಕ್ಲೈಂಟ್ ಪ್ರಾಜೆಟ್​ಗಳಲ್ಲಿ ನೇರವಾಗಿ ಇಲ್ಲದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು.

ಅಕ್ಸೆಂಚರ್ ಸಂಸ್ಥೆ ತನ್ನ ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳುತ್ತಿದೆ. 19,000 ಮಂದಿಯನ್ನು ಮನೆಗೆ ಕಳುಹಿಸುತ್ತಿದ್ದರೂ ಹೊಸ ನೇಮಕಾತಿ ಪ್ರಕ್ರಿಯೆಯೂ ಚಾಲನೆಯಲ್ಲಿರುತ್ತದೆ. ಇದರಿಂದ ಕಂಪನಿ ಇನ್ನಷ್ಟು ಬಲಯುತಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅಕ್ಸೆಂಚರ್ ಸಂಸ್ಥೆಯ ಹೇಳಿಕೆ.

ಐರ್ಲೆಂಡ್ ಮೂಲದ ಅಕ್ಸೆಂಚರ್ ಸಂಸ್ಥೆ ಕೆಲಸದಿಂದ ತೆಗೆದುಹಾಕಲಾಗುತ್ತಿರುವ 19,000 ಉದ್ಯೋಗಿಗಳಿಗೆ ಪರಿಹಾರವಾಗಿ (Severance Package) 1.2 ಬಿಲಿಯನ್ ಡಾಲರ್ (10,000 ಕೋಟಿ ರೂ) ಹಣವನ್ನು ಎತ್ತಿಟ್ಟಿದೆ. ಅಂದರೆ ಸರಾಸರಿ ಒಬ್ಬ ಉದ್ಯೋಗಿಗೆ ಸುಮಾರು 30-70 ಲಕ್ಷ ರೂನಷ್ಟು ಪರಿಹಾರ ಸಿಗಬಹುದೆಂದು ನಿರೀಕ್ಷಿಸಬಹುದು.

“2024ರ ಹಣಕಾಸು ವರ್ಷ ಹಾಗೂ ಮುಂದಿನ ವರ್ಷಗಳಿಗೆ ನಮ್ಮ ವೆಚ್ಚ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ನಮ್ಮ ವ್ಯವಹಾರಗಳಲ್ಲಿ ಮತ್ತು ನಮ್ಮ ಜನರಲ್ಲಿ ಹೂಡಿಕೆ ಮುಂದುವರಿಸಿ, ಬೆಳವಣಿಗೆಯ ಅವಕಾಶಗಳನ್ನು ಬಳಸಿಕೊಳ್ಳುತ್ತೇವೆ” ಎಂದು ಅಕ್ಸೆಂಚ್ ಸಂಸ್ಥೆಯ ಸಿಇಒ ಜೂಲೀ ಸ್ವೀಟ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!