ಹೊಸದಿಗಂತ ಮಂಗಳೂರು:
ಹಳೆ ಮನೆ ಕೆಡಹುವ ವೇಳೆ ಮೈಮೇಲೆ ಗೋಡೆ ಸಮೇತ ಲಿಂಟಲ್ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಜೈಲ್ ರೋಡ್ ಬಳಿ ನಡೆದಿದೆ.
ಜೇಮ್ಸ್, ಅಡ್ವಿನ್ ಘಟನೆಯಲ್ಲಿ ಮೃತಪಟ್ಟವರು. ಹೊಸ ಮನೆ ಕಟ್ಟಲೆಂದು ಜೇಮ್ಸ್ ಅವರು ತಮ್ಮ ಹಳೆ ಮನೆ ಕೆಡವುತ್ತಿದ್ದರು. ಈ ವೇಳೆ ಅಡ್ವಿನ್ ಜೇಮ್ಸ್ ಅವರ ಸೋದರ ಸಂಬಂಧಿಯಾಗಿದ್ದು, ಅವರು ಮಾತುಕತೆಗೆ ಎಂದು ಮನೆ ಬಳಿ ಆಗಮಿಸಿದ್ದರು. ದುರಾದೃಷ್ಟವಶಾತ್ ಈ ದುರ್ಘಟನೆ ಸಂಭವಿಸಿದೆ.
ಬಹರೇನ್ ನಲ್ಲಿ ವಾಸವಿದ್ದ ಜೇಮ್ಸ್, ಹೊಸ ಮನೆ ಕಟ್ಟಲೆಂದು ರಜೆ ಹಾಕಿ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.