ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂರತ್ ಮೆಟ್ರೋ ರೈಲು ಪ್ರಾಜೆಕ್ಟ್ ಸಮಯ ಹೈಡ್ರಾಲಿಕ್ ಲಾಂಚರ್ ಕ್ರೇನ್ ಇಂದು (ಆ.22) ನಗರದ ನಾನಾ ವರಚಾ ಪ್ರದೇಶದ ಬಂಗಲೆ ಮೇಲೆ ನೋಡ ನೋಡುತ್ತಿದ್ದಂತೆ ದಿಢೀರ್ ಕುಸಿದು ಬಿದ್ದಿದೆ.
ನಗರದ ಚಿಕುವಾಡಿ ಪ್ರದೇಶದಲ್ಲಿ ಇಂದು ಸಂಜೆ ಈ ಘಟನೆ ಸಂಭವಿಸಿದ್ದು, ಕ್ರೇನ್ ಮೆಟ್ರೋ ಕಾರಿಡಾರ್ ಪಿಲ್ಲರ್ ಸರಿಪಡಿಸುವ ವೇಳೆ ಎಡವಟ್ಟಾಗಿ ಕೆಳಗಿದ್ದ ಬಂಗಲೆಯ ಮೇಲೆ ಕುಸಿದು ಬಿದ್ದಿದೆ.
ಕ್ರೇನ್ ಬಿದ್ದ ರಭಸಕ್ಕೆ ಅಕ್ಕಪಕ್ಕದಲ್ಲಿದ್ದ ಕೆಲವು ಮರಗಳು ಮತ್ತು ಕಾರುಗಳಿಗೆ ಹಾನಿಯಾಗಿವೆ. ಆದಾಗ್ಯೂ, ಕಟ್ಟಡಕ್ಕೆ ಬೀಗ ಹಾಕಲಾಗಿದ್ದ ಕಾರಣ ಒಳಗೆ ಯಾರೂ ಇರಲಿಲ್ಲ . ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.