ಶೂಟಿಂಗ್​ ವೇಳೆ ಅವಘಡ: ಕೂದಲೆಳೆ ಅಂತರದಲ್ಲಿ ಪಾರಾದ ನಟ ವಿಶಾಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :
 
ತೆಲುಗು ನಟ ವಿಶಾಲ್​ ‘ಮಾರ್ಕ್ ಆ್ಯಂಟನಿ’ (Mark Antony) ಚಿತ್ರದ ಶೂಟಿಂಗ್​ ವೇಳೆ ಅವಘಡ ಸಂಭವಿಸಿದ್ದು, ದೊಡ್ಡ ಅಪಘಾತದಿಂದ ಪಾರಾಗಿರುವಂತಹ ಘಟನೆ ನಡೆದಿದೆ.

ಚೆನ್ನೈನ ಸ್ಟುಡಿಯೋದರಲ್ಲಿ ‘ಮಾರ್ಕ್ ಆ್ಯಂಟನಿ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾಗಾಗಿ ಲಾರಿ​ಗೆ ಸಂಬಂಧಿಸಿದ ದೃಶ್ಯವನ್ನು ಚಿತ್ರತಂಡ ಸೆರೆಹಿಡಿಯಲಾಗುತ್ತಿತ್ತು. ಈ ವೇಳೆ ಲಾರಿ ಡ್ರೈವರ್ ನಿಯಂತ್ರಣ ತಪ್ಪಿದ್ದು, ಎಲ್ಲಿ ಲಾರಿ ನಿಲ್ಲಬೇಕೋ ಅಲ್ಲಿ ನಿಲ್ಲದೆ ಮುಂದಕ್ಕೆ ನುಗ್ಗಿದೆ. ಅಲ್ಲೇ ಕೆಳಗಡೆ ಮಲಗಿದ್ದ ವಿಶಾಲ್​ ಅವರ ಪಕ್ಕದಲ್ಲೇ ಲಾರಿ ಹಾದು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯಣದಿಂದ ಪಾರಾಗಿದ್ದಾರೆ.

ಈ ವಿಚಾರವಾಗಿ ಖುದ್ದು ವಿಶಾಲ್​ ಅವರು ಮಾಹಿತಿ ನೀಡಿದ್ದಾರೆ. ‘ಕೆಲವೇ ಕ್ಷಣ ಸ್ವಲ್ಪವೇ ದೂರದಲ್ಲಿ ನನ್ನ ಸಾವು ಕಾಣಿಸಿತು. ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಅವಘಡದಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ. ಸ್ವಲ್ಪ ಸಮಯದ ಬಳಿಕ ಮತ್ತೆ ಶೂಟಿಂಗ್ ಮುಂದುವರೆಸಲಾಯಿತು’ ಎಂದು ವಿಶಾಲ್​ ಅವರು ತಮ್ಮ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ.

ಅವಘಡ ಸಂಭವಿಸಿದ ಸ್ಥಳದಲ್ಲಿ ವಿಶಾಲ್​ ಅವರು ಸೇರಿದಂತೆ ಅನೇಕ ಸಹ ಕಲಾವಿದರು, 100ಕ್ಕೂ ಹೆಚ್ಚು ಕಾರ್ಮಿಕರು, ತಂತ್ರಜ್ಞರು ಇದ್ದರು. ಲಾರಿ ನಿಯಂತ್ರಣ ಕಳೆದುಕೊಂಡು ತಮ್ಮ ಬಳಿ ಬರುತ್ತಿರುವುದನ್ನು ನೋಡಿ ಅದರಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!