ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ತಂಡದ ಆಟಗಾರ ಗ್ಲೆನ್ ಮ್ಯಾಕ್ವೆಲ್ ಅವರ ಪತ್ನಿ ವಿನಿ ರಾಮನ್ ಅವರಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ ಮಾಡಿಸಿದ್ದಾರೆ.
ತಮಿಳುನಾಡು ಮೂಲದ ವಿನಿ ರಾಮನ್ ಅವರನ್ನು ಗ್ಲೆನ್ ಮ್ಯಾಕ್ಸ್‌ವೆಲ್ 2022ರ ಮಾರ್ಚ್ 27 ರಂದು ವಿವಾಹವಾಗಿದ್ದರು. ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಇವರ ಮದುವೆ ಸಮಾರಂಭ ನಡೆದಿತ್ತು.
ಹೀಗಾಗಿ ಸೀಮಂತ ಕಾರ್ಯಕ್ರಮವನ್ನು ಭಾರತೀಯ ಸಂಪ್ರದಾಯದ ಪ್ರಕಾರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮ್ಯಾಕ್ಸ್‌ವೆಲ್ ಹಾಗೂ ವಿನಿ ಅವರ ಸ್ನೇಹಿತರು, ಹತ್ತಿರದ ಸಂಬಂಧಿಕರು ಭಾಗವಹಿಸಿದ್ದರು.
ಇದರ ಫೋಟೋಗಳನ್ನು ವಿನಿ ರಾಮನ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
‘2023ರ ಸೆಪ್ಟೆಂಬರ್‌ನಲ್ಲಿ ಒಂದು ಕಾಮನಬಿಲ್ಲು ನಮ್ಮ ಬದುಕಿನಲ್ಲಿ ಬರಲಿದೆ ಎಂದು ಘೋಷಣೆ ಮಾಡಲು ನಾನು ಹಾಗೂ ಗ್ಲೆನ್ ಭಾವುಕರಾಗಿದ್ದೇವೆ’ ಎಂದು ವಿನಿ ರಾಮನ್ ತಾವು ಗರ್ಭಿಣಿ ಎಂದು ಘೋಷಿಸುವ ವೇಳೆ ಬರೆದುಕೊಂಡಿದ್ದರು.