ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ದಿನ ಶುಭವಾಗಿರಲಿ, ಶುಭ ಕಾರ್ಯಗಳು ನೆರವೇರಲಿ ಎಂಬುದು ಪ್ರತಿಯೊಬ್ಬರ ಆಸೆ. ಹೀಗಾಗಿ, ಬೆಳಿಗ್ಗೆ ಎದ್ದು ಮೊದಲು ಏನನ್ನು ನೋಡಬೇಕು, ಏನನ್ನು ನೋಡಬಾರದು ಎಂಬ ಬಗ್ಗೆ ಹಳೆಯವರು ಹಲವು ಸಲಹೆಗಳನ್ನು ನೀಡುತ್ತಿದ್ದರು. ವಾಸ್ತು ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಕೆಲವು ವಸ್ತುಗಳನ್ನು ನೋಡಿದರೆ, ಮನಸ್ಸು ಖಿನ್ನವಾಗುವ ಸಾಧ್ಯತೆ ಇದೆ ಮತ್ತು ದೈಹಿಕ ಹಾಗೂ ಆರ್ಥಿಕ ಹಾನಿ ಉಂಟಾಗಬಹುದು ಎಂದು ನಂಬಲಾಗುತ್ತದೆ. ಹೀಗಾಗಿ, ಇಂದಿಗೂ ಜನರು ಬೆಳಿಗ್ಗೆ ಎದ್ದ ತಕ್ಷಣ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಈ ಲೇಖನದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ತಪ್ಪಿಯೂ ನೋಡಬಾರದು ಎಂಬುದನ್ನು ತಿಳಿಯೋಣ.
ನೆರಳು
ವಾಸ್ತು ಶಾಸ್ತ್ರದಲ್ಲಿ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ನೆರಳು ಅಥವಾ ಬೇರೆಯವರ ನೆರಳು ನೋಡೋದು ಅಶುಭ ಎನ್ನುತ್ತಾರೆ. ಇದರಿಂದ ಮನಸ್ಸಿಗೆ ಒತ್ತಡ ಜಾಸ್ತಿಯಾಗುತ್ತೆ ಮತ್ತು ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ.
ಕೊಳಕು ಪಾತ್ರೆಗಳು
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕೊಳಕು ಪಾತ್ರೆಗಳನ್ನು ಯಾವತ್ತೂ ನೋಡಬಾರದು. ಇದರಿಂದ ದುಡ್ಡು ನಷ್ಟ ಆಗುತ್ತೆ. ಮನೆಗೆ ಬಡತನ ಬರುತ್ತೆ. ಅದಕ್ಕೆ ನೀವು ರಾತ್ರಿ ಮಲಗೋ ಮುಂಚೆ ಪಾತ್ರೆಗಳನ್ನು ಕ್ಲೀನ್ ಮಾಡಿ ಮಲಗಿ.
ಓಡದ ಗಡಿಯಾರ
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಓಡದ ಗಡಿಯಾರ ನೋಡಬಾರದು. ಇದು ಅಶುಭ. ಇದರಿಂದ ನಿಮ್ಮ ಜೀವನದಲ್ಲಿ ಗೆಲ್ಲೋಕೆ ಕಷ್ಟ ಆಗುತ್ತೆ.
ಕನ್ನಡಿ
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ಯಾವತ್ತೂ ನೋಡಬಾರದು. ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡೋ ಅಭ್ಯಾಸ ಇಇದ್ದರೆ, ತಕ್ಷಣ ಆ ಅಭ್ಯಾಸ ಬಿಟ್ಟುಬಿಡಿ. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಜಾಸ್ತಿಯಾಗುತ್ತೆ.