ಅಕ್ರಮ ಆಸ್ತಿಗಳಿಕೆ ಆರೋಪ: ವಿರ್ ಕಸ್ಟಮ್ಸ್‌ನ ಮಾಜಿ ಅಧೀಕ್ಷಕನಿಗೆ 4 ವರ್ಷ ಜೈಲು ಶಿಕ್ಷೆ

ಹೊಸದಿಗಂತ ವರದಿ, ಬೆಂಗಳೂರು:

ಅಕ್ರಮ ಆಸ್ತಿಗಳಿಕೆ ಆರೋಪದ ಅಡಿಯಲ್ಲಿ ವಿರ್ ಕಸ್ಟಮ್ಸ್‌ನ ಮಾಜಿ ಅಧೀಕ್ಷಕನಿಗೆ ಬೆಂಗಳೂರಿನ ಕೇಂದ್ರೀಯ ತನಿಖಾ ದಳ(ಸಿಬಿಐ)ದ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ 26.65 ಲಕ್ಷ ರೂ ದಂಡ ವಿಧಿಸಿದೆ.

ಏರ್ ಕಸ್ಟಮ್ಸ್‌ನ ಮಾಜಿ ಅಧೀಕ್ಷಕ ವಿ.ವಿಶ್ವೇಶ್ವರ ಭಟ್ ಶಿಕ್ಷೆಗೊಳಗಾದವರು, ಆರೋಪಿಯು 2010 ರಿಂದ 2016ರ ಅವಧಿಯಲ್ಲಿ ಏರ್ ಕಸ್ಟಮ್ಸ್ ಅಧೀಕ್ಷಕನಾಗಿದ್ದ ಸಮಯದಲ್ಲಿ 39.65 ಲಕ್ಷ ರೂ ಆಸ್ತಿ ಸಂಪಾದಿಸಿದ್ದು, ತಮ್ಮ ಮೂಲ ಆದಾಯಕ್ಕಿಂತ ಶೇ.113.46 ರಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ 2016ರ ಮಾರ್ಚ್‌ನಲ್ಲಿ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಆರೋಪಿ 2010 ರಿಂದ 2016ರ ಅವಧಿಯಲ್ಲಿ ಸಾರ್ವಜನಿಕ ಸೇವಕರಾಗಿ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡಿದ್ದಾಗ 28.38 ಲಕ್ಷ ರೂ. ಹಣವನ್ನು ತಮ್ಮ ಆದಾಯಕ್ಕಿಂತ ಅಂದರೆ ಶೇ. 61.94 ಅಧಿಕ ಆಸ್ತಿ ಹೊಂದಿರುವ ಕುರಿತು ಸಿಬಿಐ ಅಧಿಕಾರಿಗಳು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾಲಯ ಆರೋಪಿ ವಿ.ವಿಶ್ವೇಶ್ವರ ಭಟ್ನನ್ನು ತಪ್ಪಿತಸ್ಥನೆಂದು ಘೋಷಿಸಿ, 4 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಹಾಗೂ 26.65 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!