ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಫೈಸಲಾಬಾದ್ನಲ್ಲಿ ಜರನ್‌ವಾಲಾ ಜಿಲ್ಲೆಯಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಕೆಲವು ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿದೆ.
ಇಸಾ ನಗರಿ ಪ್ರದೇಶದಲ್ಲಿ ಇರುವ ಸಾಲ್ವೇಶನ್ ಆರ್ಮಿ ಚರ್ಚ್, ಯುನೈಟೆಡ್ ಪ್ರೆಸ್ಬಿಟೇರಿಯನ್ ಚರ್ಚ್, ಅಲೈಡ್ ಫೌಂಡೇಷನ್ ಚರ್ಚ್ ಮತ್ತು ಶೆಹರೂನ್‌ವಾಲಾ ಚರ್ಚ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ಜರನ್‌ವಾಲಾ ತಹಸಿಲ್‌ನ ಪಾದ್ರಿ ಇಮ್ರಾನ್ ಭಟ್ಟಿ ಹೇಳಿದ್ದಾರೆ.
ಅಲ್ಲದೆ ಧರ್ಮನಿಂದನೆಯ ಆರೋಪ ಹೊತ್ತಿರುವ ಕ್ರಿಶ್ಚಿಯನ್ ಕ್ಲೀನರ್‌ನ ಮನೆಯನ್ನು ಸಹ ಕೆಡವಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಲಾಗಿದೆ ಹಾಗೂ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥ ಉಸ್ಮಾನ್ ಅನ್ವರ್ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಎರಡು ಮೂರು ಚಿಕ್ಕ ಚರ್ಚ್‌ಗಳಿದ್ದು, ಒಂದು ಮುಖ್ಯ ಚರ್ಚ್ ಇದೆ. ಅದರ ಭಾಗಗಳನ್ನು ಧ್ವಂಸಗೊಳಿಸಿದ್ದಾರೆ. ಶಾಂತಿ ಸಮಿತಿಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.