ಮಾಜಿ ಬಾಯ್‌ಫ್ರೆಂಡ್ ಹತ್ಯೆಗೈದ ಆರೋಪ: ಬಾಲಿವುಡ್ ನಟಿ ನಗ್ರಿಸ್ ಫಾಖ್ರಿ ಸಹೋದರಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ನಗ್ರಿಸ್ ಫಾಖ್ರಿ ಅವರು ಇದೀಗ ಸಹೋದರಿ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಲಿವುಡ್ ನಟಿ ನರ್ಗಿಸ್ ಫಾಖ್ರಿ ಸಹೋದರಿ ಆಲಿಯಾ ಫಾಖ್ರಿ ಅರೆಸ್ಟ್ ಆಗಿದ್ದಾರೆ.

ಮಾಜಿ ಬಾಯ್‌ಫ್ರೆಂಡ್ ಹಾಗೂ ಆತನ ಗೆಳತಿಯನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಡಿ ನ್ಯೂಯಾರ್ಕ್ ಪೊಲೀಸರು ಅಲಿಯಾ ಫಾಖ್ರಿಯನ್ನು ಬಂಧಿಸಿದ್ದಾರೆ.
ಹತ್ಯೆ ಕುರಿತು ನ್ಯೂಯಾರ್ಕ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದಾರೆ. ಈ ವೇಳೆ ಅಲಿಯಾ ಫಾಖ್ರಿ ಕೈವಾಡವಿರುವುದು ಪತ್ತೆಯಾಗಿದೆ. ಹೀಗಾಗಿ ನ್ಯೂಯಾರ್ಕ್ ಪೊಲೀಸರು ಅಲಿಯಾ ಫಾಖ್ರಿಯನ್ನು ಬಂಧಿಸಿದ್ದಾರೆ.

ಬಂಧನ ಬಳಿಕ ಅಲಿಯಾ ಫಾಖ್ರಿಯನ್ನು ಕ್ರಿಮಿನಲ್ ಕೋರ್ಟ್‌ಗೆಹಾಜರು ಪಡಿಸಿದ್ದಾರೆ. ಜಿಲ್ಲಾ ಅಟಾರ್ನಿ ಮಿಲಿಂಡಾ ಕಟ್ಜ್, ಅಲಿಯಾ ಫಾಖ್ರಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ.

ಇಬ್ಬರು ಅಮಾಯಕರನ್ನು ಅಪಾಯದಲ್ಲಿ ಸಿಲುಕಿಸಿ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಆರೋಪ ಈಕೆಯ ಮೇಲಿದೆ. ಇದು ಗಂಭೀರ ಪ್ರಕರಣವಾಗಿದ್ದು, ಜಾಮೀನು ನಿರಾಕರಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

ನ್ಯೂಯಾರ್ಕ್‌ನಲ್ಲಿರುವ ಆಲಿಯಾ ಫಾಖ್ರಿ ಮಾಜಿ ಗೆಳೆಯನಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಆಲಿಯಾ ಫಾಖ್ರಿ ಹಾಗೂ ಬಾಯ್‌ಫ್ರೆಂಡ್ ಸಂಬಂಧ ಗಾಢವಾಗುತ್ತಿದ್ದಂತೆ ಇವರಿಬ್ಬರ ಮಧ್ಯೆ ಮತ್ತೊಬ್ಬಳು ಎಂಟ್ರಿಯಾಗಿದ್ದಳು. ಹೀಗಾಗಿ ಬಾಯ್‌ಫ್ರೆಂಡ್ ಅಲಿಯಾಳಿಂ ದೂರವಾಗಿದ್ದ. ಆದರೆ ಇದನ್ನು ಅಲಿಯಾಗೆ ಸಹಿಸಲು ಸಾಧ್ಯವಾಗದೆ ಮಾಜಿ ಬಾಯ್‌ಫ್ರೆಂಡ್ ಹಾಗೂ ಆತನ ಗೆಳತಿಯನ್ನು ಹತ್ಯೆ ಮಾಡಿದ್ದಾಳೆ ಅನ್ನೋ ಆರೋಪ ಎದುರಿಸುತ್ತಿದ್ದಾರೆ.

ಸ್ಥಲೀಯರು ಆಲಿಯಾ ಫಾಖ್ರಿ ವಿರುದ್ಧ ಸಾಕ್ಷಿ ಹೇಳಿದ್ದಾರೆ. ಮಾಜಿ ಬಾಯ್‌ಪ್ರೆಂಡ್ ಮನೆಗೆ ಆಗಮಿಸುತ್ತಿದ್ದ ಅಲಿಯಾ ಫಾಖ್ರಿ ಸಂಬಂಧ ಬಿರುಕು ಬಿಟ್ಟ ಬಳಿಕ ಆಗಮಿಸಿ ರಂಪಾಟ ಮಾಡಿದ್ದರು ಎಂದಿದ್ದಾರೆ. ಈ ವೇಳೆ ತನಗೆ ಮೋಸ ಮಾಡಿದ ಗೆಳೆಯನ ಸುಮ್ಮನೆ ಬಿಡುವುದಿಲ್ಲ ಎಂದಿದ್ದರು. ಈ ಮನೆಗೆ ಬೆಂಕಿ ಹಚ್ಚಿ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಘಟನೆ ಕುರಿತು ನರ್ಗಿಸ್ ಫಾಕ್ರಿ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಆಲಿಯಾ ಫಾಖ್ರಿ ಯಾರನ್ನು ಕೊಲ್ಲುವ ಮನಸ್ಥಿತಿ ಇರುವ ಹುಡುಗಿಯಲ್ಲ. ಆಕೆ ಎಲ್ಲರನ್ನೂ ಪ್ರೀತಿಸುತ್ತಾಳೆ. ಎಲ್ಲರಿಗೂ ತನ್ನ ಕೈಲಾದ ಸಹಾಯ ಮಾಡುತ್ತಾಳೆ. ಈ ಪ್ರಕರಣದಲ್ಲಿ ನನ್ನ ಮಗಳನ್ನು ಸಿಲುಕಿಸಿರುವ ಸಾಧ್ಯತೆ ಇದೆ ಎಂದು ತಾಯಿ ಹೇಳಿದ್ದಾರೆ. ಈ ಘಟನೆ ಕುರಿತು ನರ್ಗಿಸ್ ಫಾಖ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!