ಅತ್ತ ಶೋಯೆಬ್‌ ಮಲೀಕ್‌ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಇತ್ತ ಸಾನಿಯಾ ಮಿರ್ಜಾ ‘ದೇಶಭಕ್ತಿ ಪೋಸ್ಟ್’ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ತಂಡದ ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗೆ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್‌ ಮಲೀಕ್‌ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು.

ಇದಾದ ಬಳಿಕ ಇಂದು ಸಾನಿಯಾ ಮಿರ್ಜಾ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ಧ್ವಜದೊಂದಿಗೆ ಪೋಸ್ಟ್‌ ಮಾಡಿದ್ದು, ‘ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಹೆಮ್ಮೆಯ ವಿಚಾರ’ ಎಂದು ಬರೆದುಕೊಂಡಿದ್ದರು.

ಇದರ ಬೆನ್ನಲ್ಲಿಯೇ ಸಾನಿಯಾ ಅವರ ಮಾಜಿ ಪತಿ ಶೋಯೆಬ್‌ ಮಲೀಕ್‌ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಸಿಲುಕಿಕೊಂಡಿದ್ದಾರೆ .
ಸಾನಿಯಾ ಈ ಪೋಸ್ಟ್‌ ಮಾಡಿದ ಕೆಲವೇ ಹೊತ್ತಿನಲ್ಲಿ, ಮ್ಯಾಚ್‌ ಫಿಕ್ಸಿಂಗ್ ಆರೋಪದಲ್ಲಿ ಶೋಯೆಬ್‌ ಮಲೀಕ್‌ ಅವರ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ ಟಿ20ಯ ಒಪ್ಪಂದ ರದ್ದು ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡಿತು. ಬಿಪಿಎಲ್‌ ಫ್ರಾಂಚೈಸಿ ಫಾರ್ಚೂನ್‌ ಬರಿಶಾಲ್‌, ಶೋಯೆಬ್‌ ಮಲಿಕ್‌ ಅವರ ಮೇಲೆ ಮ್ಯಾಚ್‌ ಫಿಕ್ಸಿಂಗ್‌ನ ಶಂಕೆ ವ್ಯಕ್ತಪಡಿಸಿದ ಕಾರಣ ಅವರ ಒಪ್ಪಂದವನ್ನು ತಂಡ ರದ್ದು ಮಾಡಿದೆ ಎಂದು ಘೋಷಣೆ ಮಾಡಿತ್ತು.

‘ಕರ್ಮ ಎನ್ನುವುದು ನಿಜ. ಖುಲ್ನಾ ಟೈಗರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದು ಓವರ್‌ನಲ್ಲಿ ಮೂರು ನೋ-ಬಾಲ್‌ಗಳನ್ನು ಎಸೆದ ನಂತರ ಫಾರ್ಚೂನ್ ಬರಿಶಾಲ್ ತಂಡ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಶೋಯೆಬ್ ಮಲಿಕ್ ಅವರ ಒಪ್ಪಂದವನ್ನು ರದ್ದುಗೊಳಿಸಿದೆ’ ಎಂದು ವ್ಯಕ್ತಿಯೊಬ್ಬರು ಸಾನಿಯಾ ಪೋಸ್ಟ್‌ಗೆ ಟ್ವೀಟ್‌ ಮಾಡಿದ್ದಾರೆ.

 

ಬಿಪಿಎಲ್‌ ಟೂರ್ನಿಯಲ್ಲಿ ಜನವರಿ 22 ರಂದು ಶೇರ್‌ ಎ ಬಾಂಗ್ಲಾ ರಾಷ್ಟ್ರೀಯ ಸ್ಟ್ರೇಡಿಯಲ್ಲಿ ನಡೆದ ಪಂದ್ಯದಲ್ಲಿ ಖುಲ್ನಾ ಟೈಗರ್ಸ್‌ ವಿರುದ್ಧ ಆಡುವ ವೇಳೆ ಶೋಯೆಬ್‌ ಮಲೀಕ್‌ ಒಂದೇ ಓವರ್‌ನಲ್ಲಿ ಮೂರು ನೋಬಾಲ್‌ ಎಸೆದಿದ್ದರು. ಅದಲ್ಲದೆ, ಡೆತ್‌ ಓವರ್‌ ಬ್ಯಾಟಿಂಗ್‌ನಲ್ಲಿ 6 ಎಸೆತಗಳನ್ನು ಆಡಿ ಬರೀ 5 ರನ್‌ ಮಾಡಿದ್ದರು.

ಫ್ರಾಂಚೈಸಿಯ ಮಾಲೀಕ ಮಿಜಾನುರ್‌ ರೆಹಮಾನ್‌ ಖಾಸಗಿ ಟಿವಿ ವಾಹಿನಿಯಲ್ಲಿ ಮಾತನಾಡುವ ವೇಲೆ, ಶೋಯೆಬ್‌ ಮಲಿಕ್‌ ಅವರು ತಮ್ಮ ನಾಲ್ಕನೇ ಓವರ್‌ನಲ್ಲಿ ಮೂರು ನೋಬಾಲ್‌ಗಳನ್ನು ಎಸೆದು 18 ರನ್‌ ನೀಡಿರುವ ಬಗ್ಗೆ ಭ್ರಷ್ಟಚಾರ ವಿರೋಧಿ ಘಟಕ ಗಮನಿಸಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಅವರ ಒಪ್ಪಂದ ರದ್ದಾಗಿರುವ ಬಗ್ಗೆ ತಂಡ ಮಾಹಿತಿ ನೀಡಿದೆ.

ಮಲಿಕ್‌ ಅವರ ಮೇಲೆ ಎಸಿಯು ತನಿಖೆ ಆಗಬೇಕು ಎಂದು ಮಿಜಾನುರ್‌ ಹೇಳಿದ್ದಾರೆ. ಅದಲ್ಲದೆ, ಸ್ವತಃ ತಾವೂ ಕೂಡ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಎಸಿಯುಗೆ ಜನವರಿ 25 ರಂದು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಆಫ್‌ ಸ್ಪಿನ್ನರ್‌ ಒಬ್ಬ ಒಂದೇ ಓವರ್‌ನಲ್ಲಿ ಮೂರು ನೋಬಾಲ್‌ಗಳನ್ನು ಎಸೆಯುವುದು ಎಂದರೆ ಅದು ಅಸಾಧ್ಯವಾದ ಮಾತು. ಇದರಿಂದಾಗಿಯೇ ನಾವು ಪಂದ್ಯ ಸೋಲು ಕಂಡೆವು ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!