ಮಟನ್‌ನೊಂದಿಗೆ ಗೋಮಾಂಸ ಮಿಕ್ಸ್ ಆರೋಪ: ಬ್ರಿಟನ್‌ನಲ್ಲಿ ಪಾಕ್ ರೆಸ್ಟೋರೆಂಟ್ ಧ್ವಂಸಗೊಳಿಸಿದ ಭಾರತೀಯರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟನ್‌ನಲ್ಲಿನ ಪಾಕ್ ರೆಸ್ಟೋರೆಂಟ್ ನಲ್ಲಿ ಕುರಿ ಮಾಂಸದ ಜೊತೆಗೆ ಗೋಮಾಂಸ ಬೆರೆಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯರು ಧ್ವಂಸಗೊಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಭಾರತೀಯರು ರೆಸ್ಟೋರೆಂಟ್ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ರೆಸ್ಟೋರೆಂಟ್ ನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದು 2 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ರೆಸ್ಟೋರೆಂಟ್ ಮಾಲೀಕರು ಆರೋಪಿಸಿದ್ದಾರೆ.

ಬ್ರಿಟನ್ ನಲ್ಲಿರುವ ಶೆಫೀಲ್ಡ್‌ನ ರೆಸ್ಟೋರೆಂಟ್ ಒಂದರಲ್ಲಿ ಬೀಫ್‌ ಖಾದ್ಯದ ವಿಚಾರವಾಗಿ ಗಲಾಟೆ ನಡೆದಿದೆ. ಇಲ್ಲಿನ ಅಬ್ಬಾಸಿನ್‌ ಡಿನ್ನರ್‌ ರೆಸ್ಟೋರೆಂಟ್‌ಗೆ ಊಟಕ್ಕೆಂದು ಬಂದ ಭಾರತೀಯ ಮೂಲದ ಗ್ರಾಹಕರು ಮೆನುವಿನಲ್ಲಿ ಬೀಫ್‌ ಖಾದ್ಯಗಳ ಹೆಸರನ್ನು ಕಂಡು ಕೋಪಗೊಂಡು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ.

https://x.com/Partisan_12/status/1875155196420243894?ref_src=twsrc%5Etfw%7Ctwcamp%5Etweetembed%7Ctwterm%5E1875155196420243894%7Ctwgr%5E1a8a793dc55c6ff6a88f970873f58277fa5203d5%7Ctwcon%5Es1_&ref_url=https%3A%2F%2Fwww.kannadaprabha.com%2Fworld%2F2025%2FJan%2F06%2Findian-nationals-attack-pakistani-restaurant-in-uk-for-serving-beef
ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ರೆಸ್ಟೋರೆಂಟ್ ಕಿಟಕಿಗಳನ್ನು ಒಡೆದು, ಕುರ್ಚಿಗಳು ಮತ್ತು ಟೇಬಲ್‌ಗಳನ್ನು ಉರುಳಿಸುವ ಮೂಲಕ ಮತ್ತು ವಿವಿಧ ವಸ್ತುಗಳನ್ನು ಹಾನಿ ಮಾಡುವ ಮೂಲಕ ಧ್ವಂಸಗೊಳಿಸಿದ್ದಾರೆ. ಹಿಂದುಗಳಿಗೆ ಪವಿತ್ರವಾದ ಗೋಮಾಂಸವನ್ನು ತಮ್ಮ ಭಕ್ಷ್ಯಗಳಲ್ಲಿ ಮಟನ್‌ನೊಂದಿಗೆ ಬೆರೆಸುತ್ತಾರೆ ಎಂದು ಆರೋಪಿಸಿದ್ದಾರೆ. ಘಟನೆಯ ನಂತರ, ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ, ಗೊಂದಲ ಮತ್ತು ಆಸ್ತಿ ಹಾನಿ ಹಿನ್ನೆಲೆಯಲ್ಲಿ ಭಾರತೀಯರನ್ನು ಬಂಧಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!