Tuesday, March 28, 2023

Latest Posts

ಅವಹೇಳನಕಾರಿ ಪದ ಬಳಕೆ ಆರೋಪ: ಆಂಧ್ರ ಸಿಎಂ ಸಹೋದರಿ ಎಸ್.ಶರ್ಮಿಳಾ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆಡಳಿತ ಪಕ್ಷ ಭಾರತೀಯ ರಾಷ್ಟ್ರೀಯ ಸಮಿತಿಯ ಶಾಸಕ (BRS) ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದ ಮೇಲೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ (Y.S.Jagan Mohan Reddy) ಸಹೋದರಿ , ವೈಎಸ್‍ಆರ್ ತೆಲಂಗಾಣ ಪಾರ್ಟಿಯ (YSRTP) ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರನ್ನು ತೆಲಂಗಾಣದ ಮೆಹಬೂಬಾಬಾದ್‍ನ ಬೆತೋಲ್‍ನಲ್ಲಿ ಬಂಧಿಸಲಾಗಿದೆ.
ಶರ್ಮಿಳಾ ವಿರುದ್ಧ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ (SC, ST atrocities case) ಅಡಿ ಪ್ರಕರಣ ದಾಖಲಿಸಲಾಗಿದೆ.

ಮೆಹಬೂಬಾಬಾದ್ ನಗರದ ಶಾಸಕ ಶಂಕರ್ ನಾಯ್ಕ್ ವಿರುದ್ಧ ಪಕ್ಷದ ಸಭೆಯೊಂದರಲ್ಲಿ ಶರ್ಮಿಳಾ ಅವರು ಮಾನಹಾನಿ ಪದಗಳ ಬಳಕೆ ಮಾಡಿದ್ದರು. ದರೋಡೆ, ಅಕ್ರಮ, ಭೂ ಒತ್ತುವರಿ, ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಆರ್‍ಎಸ್ ಮಂಡಲ್ ಅಧ್ಯಕ್ಷ ಲುನಾವತ್ ಅಶೋಕ್ ಅವರು ಪೊಲೀಸ್ ಠಾಣೆಯಲ್ಲಿ ಶರ್ಮಿಳಾ ವಿರುದ್ಧ ದೂರು ದಾಖಲಿಸಿದ್ದರು.
ಮೆಹಬೂಬಾಬಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಸಹ ಶರ್ಮಿಳಾ ಅವರ ಬೆಂಬಲಿಗರು ಹಾಗೂ ಬಿಆರ್‍ಎಸ್ ಪಕ್ಷದ ಕಾರ್ಯಕರ್ತರೊಂದಿಗಿನ ಗಲಾಟೆ ವಿಚಾರವಾಗಿ ಹೈದ್ರಾಬಾದ್ ಪೊಲೀಸರು ಆಕೆಯನ್ನು ಬಂಧಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!