ವಯನಾಡು ಸಂತ್ರಸ್ತರಿಗೆ 15ಕೋಟಿ ರೂ.300 ಮನೆಗಳ ನಿರ್ಮಾಣಕ್ಕೆ ಮುಂದಾದ ಆರೋಪಿ ಸುಖೇಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸುಮಾರು 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರನ್ ಜೈಲಿನಿಂದಲೇ ಪುಣ್ಯದ ಕೆಲಸ ಮಾಡೋಕೆ ತಯಾರಾಗಿದ್ದಾರೆ.

ವಯನಾಡಿನಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೆರವು ನೀಡಲು ಇಚ್ಛಿಸುತ್ತೇನೆ, ಸಂತ್ರಸ್ತರಿಗೆ 15 ಕೋಟಿ ರೂ. ದೇಣಿಗೆ ಹಾಗೂ 300 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾನೆ.

ವಯನಾಡಿನ ಭೂಕುಸಿತ ದುರಂತ ಕಂಡು ತುಂಬಾ ನೋವಾಗಿದೆ. ಆದ್ದರಿಂದ ಪರಿಹಾರ ನಿಧಿಗೆ ನೀಡಬೇಕಂತಿರುವ 15 ಕೋಟಿ ರೂ. ಹಣವನ್ನು ಸ್ವೀಕರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಇಂತಹ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಬಯಸುತ್ತೇನೆ. ಆ ಹಣವನ್ನು ಹೊರತುಪಡಿಸಿ ನಾನು ಸಂತ್ರಸ್ತರಿಗೆ ತುರ್ತು ಅಗತ್ಯತೆಯ ನೆಲೆಯಲ್ಲಿ 300 ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಎಂದು ತಿಳಿದುಬಂದಿದೆ.

ಇದು ಚಂದ್ರಶೇಖರ್ ಬರೆದಿರುವ ಪತ್ರ ಎಂದು ಆತನ ಪರ ವಕೀಲ ಅನಂತ್ ಮಲಿಕ್ ಅವರು ಖಚಿತಪಡಿಸಿದ್ದಾರೆ. ಕಾನೂನುಬದ್ಧ ವ್ಯವಹಾರ ಖಾತೆಗಳಿಂದಲೇ ಈ ಹಣ ನೀಡುವುದಾಗಿ ತಿಳಿಸಿರುವ ಸುಕೇಶ್ ಚಂದ್ರಶೇಖರ್, ರಾಜ್ಯ ಸರ್ಕಾರವು ಈ ಪ್ರಸ್ತಾಪವನ್ನು ಸ್ವೀಕರಿಸಬೇಕು ಮತ್ತು ಭೂಕುಸಿತ ದುರಂತಲ್ಲಿ ಸಂತ್ರಸ್ತರ ಕಲ್ಯಾಣ ಮತ್ತು ಪುನರ್ವಸತಿಗಾಗಿ ಈ ಹಣವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಸುಕೇಶ್ ಚಂದ್ರಶೇಖರ್ ಪತ್ರಕ್ಕೆ ಕೇರಳ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!