ಆರೋಪ ಮುಕ್ತನಾಗಿ ಬರುವ ವಿಶ್ವಾಸವಿದೆ: ಈಶ್ವರಪ್ಪ‌

ಹೊಸ ದಿಗಂತ ವರದಿ, ತುಮಕೂರು:

ಗುತ್ತಿಗೆದಾರನ ಆತ್ಮಹತ್ಯೆಯಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಪ್ರಕರಣದಿಂದ ಆರೋಪ ಮುಕ್ತನಾಗಿ ಬರಬೇಕು ಎನ್ನುವ ದೃಷ್ಠಿಯಿಂದ ರಾಜೀನಾಮೆ ನೀಡುತ್ತಿದ್ದು ಆರೋಪದಿಂದ ಮುಕ್ತನಾಗಿ ಬರುವ ವಿಶ್ವಾಸವಿದೆ ಎಂದು ಪಂಚಾಯತ ರಾಜ್‌ಮತ್ತು ಗ್ರಾಮೀಣಾಭಿವೃದ್ಧಿ ‌ಸಚಿವ‌‌.ಈಶ್ವರಪ್ಪ‌ ಹೇಳಿದರು.
ಮುಖ್ಯ ಮಂತ್ರಿ ಗಳಿಗೆ ರಾಜಿನಾಮೆ‌ ಪತ್ರ ಸಲ್ಲಿಸಲು ಬೆಂಗಳೂರಿಗೆ ಹೋಗುವ ‌ಮಾರ್ಗಮಧ್ಯೆ ತಿಪಟೂರಿನಲ್ಲಿ‌ ಸಚಿವ‌ ನಾಗೇಶ್‌ ಮನೆಗೆ‌ ಭೇಟಿ‌ ನೀಡಿದಾಗ‌‌ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ 40% ಕಮಿಷನ್ ಹಗರಣದಲ್ಲಿ ಇನ್ನೂ 4 ಜನ ಸಚಿವರ ಹೆಸರಿದೆ ಎಂದು ಹೇಳಿರುವುದು ನಿರಾಧಾರವಾಗಿದ್ದು ಖರ್ಗೆಯವರು ಹಾಗೂ ಕಾಂಗ್ರೆಸ್ ನಾಯಕರಿಗೆ ತಾಕತ್ ಇದ್ದರೆ ನಾಲ್ಕು ಜನ ಸಚಿವರ ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ನನಗೆ ಆರೋಪ ಮುಕ್ತವಾಗಿ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.
ಸಚಿವ ಬಿ.ಸಿ ನಾಗೇಶ್ ಸೇರಿದಂತೆ ಈಶ್ವರಪ್ಪನವರ ಪುತ್ರ ವಿನಯ್, ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್ ಸೇರಿದಂತೆ ಅನೇಕರು ಉಪಸ್ಥಿತರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!