Tuesday, October 3, 2023

Latest Posts

ಜೈಲು ಗೋಡೆ ಹಾರಿ ಪರಾರಿಯಾಗಿದ್ದ ಆರೋಪಿ ಬಂಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜೈಲು ಗೋಡೆ ಹಾರಿ ಪರಾರಿಯಾಗಿದ್ದ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಪೋಕ್ಸೋ ಪ್ರಕರಣದಡಿ ಬಂಧಿತನಾಗಿ ಜೈಲು ಸೇರಿದ್ದ ಆರೋಪಿಯೊಬ್ಬ ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಘಟನೆ ದಾವಣಗೆರೆ ಉಪಕಾರಾಗ್ರಹದಲ್ಲಿ ನಿನ್ನೆ ನಡೆದಿತ್ತು. ಒಂದೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾನ್ಸ್ ಟೇಬಲ್ ನಿಜಲಿಂಗಪ್ಪ ನೀಡಿರುವ ಖಚಿತ ಮಾಹಿತಿ ಆಧರಿಸಿ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ದಗ್ಗಾವತಿ ಬಳಿ ಆರೋಪಿ ಆಟೋ ಚಾಲಕ ವಸಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!