Tuesday, March 28, 2023

Latest Posts

‘ಆರೋಪ ಮಾಡುವವರೇ ಶುದ್ಧವಾಗಿಲ್ಲ, ಅಸ್ಥಿತ್ವ ಉಳಿಸಿಕೊಳ್ಳೋಕೆ ಕಾಂಗ್ರೆಸ್ ಪ್ರತಿಭಟನೆ’

ಹೊಸದಿಗಂತ ವರದಿ ಹುಬ್ಬಳ್ಳಿ:

ಭ್ರಷ್ಟಾಚಾರದ ಕೂಪ ಕಾಂಗ್ರೆಸ್. ಅವರು ಮಾಡಿರುವಂತಹ ಕರ್ಮಕಾಂಡ ಒಂದಾ ಎರಡಾ?  ರಾಜಕೀಯ ಭವಿಷ್ಯದಲ್ಲಿ ಅಸ್ತಿತ್ವದ ಉಳಿವಿಗಾಗಿ ಪ್ರತಿಭಟನೆಗೆ ಮಾಡುತ್ತಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಭ್ರಷ್ಟಾಚಾರ ವಿರೋಧಿ ಮಾ. 9 ರಂದು ಪ್ರತಿಭಟನೆ ಮಾಡಲು ಮುಂದಾಗಿರುವ ಕಾಂಗ್ರೆಸ್ ಗೆ ಸೋಮವಾರ ನಗರದಲ್ಲಿ ಮಾಧ್ಯಮದವರಿಗೆ ಈ ರೀತಿ ಪ್ರತಿಕ್ರಿಸಿ, ಅವರಿಗೆ ಜನರಿಂದ ಯಾವುದೇ ರೀತಿ ಸ್ಪಂದನೆ ದೊರೆಯುವುದಿಲ್ಲ ಎಂದರು.

ಆರೋಪ ಮಾಡುವರು ಶುದ್ಧವಾಗಿರಬೇಕು. ತಮ್ಮ ಆಡಳಿತದ ಅವಧಿಯಲ್ಲಿ ದಿಂಬು, ಹಾಸಿಗೆ, ಬಿಸ್ಕೆಟ್, ಕಾಫಿ ಹಾಗೂ ದೊಡ್ಡ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಟಾರ್ಗೆಟ್ ನೀಡಿದ್ದರು. ಎಂ.ಬಿ‌. ಪಾಟೀಲ, ಕೆ.ಎ.ಚಾರ್ಜ ಅವರಿಗೆ ಕೇಳಿ ಗೋತ್ತಾಗುತ್ತದೆ. ಕಾಂಗ್ರೆಸ್ ನಾಯಕರ ಬಗ್ಗೆ ಜನರಿಗೆ ಸಂಪೂರ್ಣವಾಗಿಗೊತ್ತಿದೆ. ಆದರಿಂದ ಇವರಿಗೆ ಯಾವುದೇ ಬೆಂಬಲ ದೊರೆಯುವುದಿಲ್ಲ. ಬರುವ ವಿಧಾನ ಸಭಾ ಚುನಾವಣೆಯಲ್ಲಿ ಜನರ ಇವರಿಗೆ ಬುದ್ಧಿ ಕಳಿಸುತ್ತಾರೆ ಎಂದು ಹರಿಹಾಯ್ದರು.

ಬೆಳಗಾವಿ ಗ್ರಾಮೀಣ ಭಾಗದ ಶಿವಾಜಿ ಪುತ್ಥಳಿ ಅನಾವರಣ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಹಾಸ್ಯಾಸ್ಪದವಾಗಿದೆ. ಸರ್ಕಾರ ಕಾರ್ಯಕ್ರಮ ಅದು ಎಲ್ಲರನ್ನೂ ಆಹ್ವಾನಿಸಲಾಗಿತ್ತು. ರಾಜಕೀಯ ಒಣ ಪ್ರತಿಷ್ಠೆಗಾಗಿ ಕಾಂಗ್ರೆಸ್ ನವರು ಮಾಡಿದ್ದಾರೆ. ರಾಷ್ಟ್ರ ನಾಯಕರು, ಸ್ವಾತಂತ್ರ್ಯ ಹೋರಾಟಗಾರ ರಾಜಕೀಯ ಪ್ರತಿಷ್ಠೆಗೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು. ಕಬ್ಬು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!