ವಯಸ್ಸಿಗೂ ಮೀರಿದ ಸಾಧನೆ: ಇಂಡಿಯಾ ಬುಕ್ ಆಫ್ ರೆರ್ಕಾರ್ಡ್ ಸೇರಿದ ಬಾಲಕನ ಹೆಸರು!

ಹೊಸದಿಗಂತ ವರದಿ,ಹುಬ್ಬಳ್ಳಿ:

ಇಲ್ಲಿಯ ಕೋಟಿಲಿಂಗೇಶ್ವರ ನಗರದ ೨ ವರ್ಷ ೧೧ ತಿಂಗಳದ ಸಮೃದ್ಧ ಶ್ರೀಕಾಂತ ಶೆಟ್ಟಿ ಎಂಬ ಬುದ್ದಿವಂತ ಬಾಲಕ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದೆ.
ಸಮೃದ್ಧ ಶೆಟ್ಟಿ ಶ್ರೀಕಾಂತ ಮತ್ತು ಚಾರುಲತಾ ಎಂಬ ದಂಪತಿಗಳ ಮಗನಾಗಿದ್ದಾನೆ. ತನ್ನ ವಯಸ್ಸಿಗೆ ಮೀರಿ ಅಪಾರ ಜ್ಞಾನವನ್ನು ಹೊಂದಿದ್ದು, ೧೫ ಬಗೆಯ ಯೋಗಾಸ ಮಾಡುತ್ತಾನೆ. ಅಷ್ಟೇ ಅಲ್ಲದೆ ಸೌರಮಂಡಲದ ಗೃಹಗಳು ಗುರುತಿಸುವಿಕೆ, ಪರಿಚಯ, ರಾಜ್ಯದ ಎಲ್ಲ ನದಿಗಳು, ೧೬ ಸಾಮಾನ್ಯ ಜ್ಞಾನ ಪ್ರಶ್ನೆಗೆ ಉತ್ತರ, ೭ ಖಂಡಗಳ, ೩ ಪ್ರಾಸಗಳು, ೨೧ ಪ್ರಾಣಿಗಳ, ೫ ಪಕ್ಷಿಗಳ, ೧೩ ಹಣ್ಣುಹಂಪಲಗಳ, ೭ ತರಕಾರಿಗಳ, ೧೪ ವಾಹನಗಳ, ೧೦ ಬಣ್ಣಗಳ ಹೆಸರುಗಳನ್ನು ಸರಾಗವಾಗಿ ಹೇಳುತ್ತಾನೆ. ವಯಸ್ಸಿಗೂ ಮೀರಿದ ಸಾಧನೆ ಇಂಡಿಯಾ ಬುಕ್ ಆಫ್ ರೆರ್ಕಾರ್ಡ್ ಸೇರಿದ್ದು, ಇಡೀ ಜಿಲ್ಲೆ ಹೆಮ್ಮೆ ಪಡುವಂತಾಗಿದೆ.
ಮನೆಯೇ ಮೊದಲ ಪಾಠ ಶಾಲೆ: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿಗೆ ಸಮೃದ್ಧ ಶೆಟ್ಟಿ ಚಿಕ್ಕ ಬಾಲಕನ ಸಾಧನೆ ಸಾಕ್ಷಿಯಾಗಿದೆ. ಶ್ರೀಕಾಂತ ಮತ್ತು ಚಾರುಲತಾ ದಂಪತಿಗಳು ಮನೆಯಲ್ಲಿಯೇ ಸಮೃದ್ಧನಿಗೆ ಪ್ರತಿನಿತ್ಯ ಯೋಗಾಸನ, ಆಟ, ಗೃಹಗಳ, ಖಂಡಗಳ, ನದಿಗಳು ಸೇರಿದಂತೆ ಅನೇಕ ಸಾಮಾನ್ಯ ಜ್ಞಾನ ಹೆಚ್ಚಿಸುವ ವಿಷಯಗಳ ಬಗ್ಗೆ ಕಲಿಸುತ್ತಾರೆ. ತಂದೆ ತಾಯಿ ಹೇಳಿಕೊಡುವ ಪ್ರತಿಯೊಂದು ವಿಷಯವನ್ನು ಸಮೃದ್ಧ ಸಹ ಖಷಿಯಿಂದ ಕಲಿಯುತ್ತಾನೆ. ಒಂದು ಸಾರಿ ಹೇಳಿಕೊಟ್ಟಿರುವ ವಿಷಯ ಮರಿಯದೆ ನೆನಪಿಟ್ಟುಕೊಳ್ಳುವ ಸಾಮಾರ್ಥ್ಯ ಈ ಬಾಲಕನಲ್ಲಿದೆ.
ಅಪಾರ ನೆನಪಿನ ಶಕ್ತಿ: ಇತ್ತೀಚಿನ ದಿನಗಳಲ್ಲಿ ಮಕ್ಕಳ ನೆನಪಿನ ಶಕ್ತಿ ಬಲಗೊಳ್ಳುತ್ತಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಮಕ್ಕಳಿಗೆ ಯಾವುದೇ ವಿಷಯವನ್ನು ಹೇಳಿದರು ಸರಳ ಹಾಗೂ ಸರಾಗವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರಿಂದ ಚಿಕ್ಕಮಕ್ಕಳ ಮುಂದೆ ಮಾತನಾಡುವಾಗ ಪೋಷಕರು ಎಚ್ಚರದಿಂದ ಇರಬೇಕು. ಸಮೃದ್ಧನಿಗೂ ಸಹ ಒಂದು ಸಾರಿ ಹೇಳಿದ ಯಾವುದೇ ವಿಷಯವನ್ನು ತಕ್ಷಣ ಮನನ ಮಾಡಿಕೊಳ್ಳುತ್ತಾನೆ. ಯಾವುದೇ ಸಮಯದಲ್ಲಿ ಕೇಳಿದರು ಉತ್ತರ ನೀಡಬಲ್ಲ ಸಾಮಾರ್ಥ್ಯ ಹೊಂದಿದ್ದಾನೆ.
ಚಿಕ್ಕವಯಸ್ಸಿನಲ್ಲೇ ಸಾಕಷ್ಟು ಜ್ಞಾನ ಹೊಂದಿರುವ ಇತನ ಸಾಧನೆ ನಿಜಕ್ಕೂ ಜನರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ ಹದಿನೈದು ಬಗೆಯ ಯೋಗದ ಆಸನ ಮಾಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ತಮ್ಮ ಜವಾಬ್ದಾರಿ ನಿರ್ವಹಣೆ, ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಕಾಳಜಿ ಸ್ವಲ್ಪ ಕಡಿಮೆಯಾಗುತ್ತಿದೆ. ಅದರಂತೆ ಮಕ್ಕಳು ಮೊಬೈಲ್ ಬಳಕೆಯಿಂದ ತಮ್ಮಲ್ಲಿರುವ ಕೌಶಲ್ಯವನ್ನು ಮರೆತು ಹೋಗುತ್ತಿದ್ದಾರೆ. ಆದರೆ ಸಮೃದ್ಧ ಮಾತ್ರ ಮೊಬೈಲ್‌ನ್ನು ಮನರಂಜನೆಗಾಗಿ ಬಳಕೆ ಮಾಡದೇ ಸಾಮಾನ್ಯ ಜ್ಞಾನ ಹೆಚ್ಚಿಸುವ ವಿಷಯಗಳನ್ನು ತಿಳಿದುಕೊಳ್ಳುತ್ತಾನೆ. ಇದರಿಂದ ದೇಶದ ಬಾಲ ಸಾಧಕರ ಪಟ್ಟಿಯಲ್ಲಿ ಮಗನ ಹೆಸರು ಸೇರಿದೆ ಎಂದು ಸಮೃದ್ಧ ತಾಯಿ ಚಾರುಲತಾ ಶ್ರೀಕಾಂತ ಶೆಟ್ಟಿ ಹೇಳುವ ಮಾತುಗಳಿವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!