ರಾಷ್ಟ್ರೀಯ ಕುಸ್ತಿಪಟುಗಳ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗರ ಸಾಧನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡಿದರು. ಕರ್ನಾಟಕ ತಂಡ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸತತ ಐದು ರಾಷ್ಟ್ರೀಯ ಪದಕಗಳನ್ನು ಗೆದ್ದುಕೊಂಡಿತು.

ಸೀನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ 1 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದಿದೆ. ಐದು ರಾಷ್ಟ್ರೀಯ ಪದಕಗಳನ್ನು ಗೆದ್ದ ಕರ್ನಾಟಕದ ಕುಸ್ತಿಪಟುಗಳ ತಂಡ ಮತ್ತು ಕೋಚ್‌ಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

ಪದಕ ವಿಜೇತರ ಪಟ್ಟಿ
ಚಿನ್ನ: 97ಕೆಜಿ ವಿಭಾಗದಲ್ಲಿ ಸುನಿಲ್ ಪಿ.
ಬೆಳ್ಳಿ: 70ಕೆಜಿ ವಿಭಾಗದಲ್ಲಿ ಮಹೇಶ್ ಎಲ್.
ಬೆಳ್ಳಿ: 79ಕೆಜಿ ವಿಭಾಗದಲ್ಲಿ ಸದಾಶಿವ ಎನ್.
ಬೆಳ್ಳಿ: 86ಕೆಜಿ ವಿಭಾಗದಲ್ಲಿ ಗೋಪಾಲ್ ಕೋಲಿ.
ಕಂಚು: 74ಕೆಜಿ ವಿಭಾಗದಲ್ಲಿ ರೋಹನ್ ಎನ್.

ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ಅಧ್ಯಕ್ಷರು ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಿ. ಗುಣರಂಜನ್ ಶೆಟ್ಟಿ ಕರ್ನಾಟಕ ರಾಜ್ಯ ಕುಸ್ತಿ ತಂಡವನ್ನು ಅಭಿನಂದಿಸಿದರು. ನಿಮ್ಮ ಕಠಿಣ ಶ್ರಮದಿಂದ ಕರ್ನಾಟಕಕ್ಕೆ ಗೌರವ ಬಂದಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!