ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.95.2 ಅಂಕ ಪಡೆದ ಆಯಸಿಡ್​ ದಾಳಿ ಸಂತ್ರಸ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಸಿಡ್ ದಾಳಿಯಿಂದ ಕಣ್ಣುಗಳನ್ನು ಕಳೆದುಕೊಂಡಿದ್ದ ಬಾಲಕಿಯೊಬ್ಬಳು, 10ನೇ ತರಗತಿ ಸಿಬಿಎಸ್‍ಇ (CBSE) ಪರೀಕ್ಷೆಯಲ್ಲಿ 95.02% ಅಂಕಗಳನ್ನು ಗಳಿಸುವ ಮೂಲಕ ತನ್ನ ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾಳೆ.

ಚಂಡೀಗಢದ 15 ವರ್ಷದ ಕಾಫಿ (Kafi) ಎಂಬ ವಿದ್ಯಾರ್ಥಿನಿ ಈ ಸಾಧನೆಗೈದವಳು.

ಬಾಲಕಿಯ ತಂದೆ ಸಂಸ್ಥೆ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕಾಫಿ 3 ವರ್ಷದವಳಿದ್ದಾಗ ಪಕ್ಕದ ಮನೆಯವರು ಅಸೂಯೆಯಿಂದ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದರು. ನಂತರ ಆಕೆಯ ಸಂಪೂರ್ಣ ಮುಖವು ಸುಟ್ಟುಹೋಗಿತ್ತು. 6 ವರ್ಷಗಳ ನಂತರ ಅವಳು ಕಣ್ಣುಗಳನ್ನು ಕಳೆದುಕೊಂಡಿದ್ದಳು. ಬಳಿಕ ವಿದ್ಯಾರ್ಥಿನಿ ಬ್ರೈಲ್ ಲಿಪಿಯ ಮೂಲಕ ಅಧ್ಯಯನ ಆರಂಭಿಸಿದ್ದಳು. ಅಲ್ಲದೆ ತುಂಬ ವೇಗವಾಗಿ ಬ್ರೈಲ್ ಲಿಪಿ ಓದುವ ಕೌಶಲ್ಯ ಕರಗತ ಮಾಡಿಕೊಂಡಿದ್ದಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!