ಅಸಿಡಿಟಿ ಔಷಧ ರಾನಿಟಿಡಿನ್ ‘ಅಗತ್ಯ ಔಷಧ’ ಪಟ್ಟಿಯಿಂದ ಹೊರಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

(ಅಪ್ಡೇಟ್- ಈ ಮೊದಲು ಪ್ರಕಟವಾಗಿದ್ದ ವರದಿಯಲ್ಲಿ ಇಲ್ಲಿ ನಮೂದಿತ ಔಷಧಗಳು ನಿಷೇಧಿತವಾಗಿವೆ ಎಂದು ಬರೆಯಲಾಗಿತ್ತು. ಆದರೆ ಸರ್ಕಾರವು ಕಾಲಕಾಲಕ್ಕೆ ಪರಿಷ್ಕರಿಸುವ ‘ಅಗತ್ಯ ಔಷಧಗಳ’ ಪಟ್ಟಿಯಿಂದ ಹೊರಗೆ ಬಂದಿರುವ ಔಷಧಗಳೆಲ್ಲವೂ ನಿಷೇಧಿತ ಎನ್ನಲಾಗುವುದಿಲ್ಲ. ಅದಕ್ಕಿಂತ ಪರಿಣಾಮಕಾರಿಯಾಗಿರುವ ಔಷಧಗಳು ಬಂದಾಗಲೂ ಕೆಲವು ಔಷಧಗಳು ಪಟ್ಟಿಯಿಂದ ಹೊರಗುಳಿಯುತ್ತವೆ. ನಿಷೇಧ ಹಾಗೂ ಔಷಧಗಳ ಮೇಲಿನ ಸುರಕ್ಷತೆ ಕುರಿತಾದ ಆತಂಕವೂ ಅವುಗಳನ್ನು ಪಟ್ಟಿಯಿಂದ ಹೊರಗಿಡುವುದಕ್ಕೆ ಕಾರಣಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಮೂಲ ವರದಿ ಪರಿಷ್ಕರಿಸಲಾಗಿದೆ.)

ಅಸಿಡಿಟಿ ಹಾಗೂ ಹೊಟ್ಟೆ ನೋವಿಗೆ ನೀಡುತ್ತಿದ್ದ ಜನಪ್ರಿಯ ಆಂಟಿಸಿಡ್ ರಾನಿಟಿಡಿನ್ ಔಷಧವನ್ನು ಕೇಂದ್ರ ಸರ್ಕಾರ ಅಗತ್ಯ ಔಷಧಗಳ ಪಟ್ಟಿಯಿಂದ ಹೊರಗಿರಿಸಿದೆ.  ಇದರ ಜೊತೆಗೆ ಇನ್ನಿತರ 26 ಔಷಧಗಳನ್ನು ಪಟ್ಟಿಯಿಂದ ಹೊರಗಿರಿಸಲಾಗಿದೆ.

ರಾನಿಟಿಡಿನ್ ಔಷಧವನ್ನು ಅಸಿಲೋಕ್, ಜೆನೆಟಾಕ್ ಮತ್ತು ರಾಂಟಾಕ್ ಎಂಬ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಹೊಟ್ಟೆನೋವು, ಗ್ಯಾಸ್ ಸಮಸ್ಯೆಗಳಿಗೆ ಇದನ್ನು ಬಳಸಲಾಗುತ್ತಿತ್ತು. ಇವುಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿರಬಹುದೇ ಎಂಬ ಪ್ರಶ್ನೆಗಳೂ ಎದ್ದಿದ್ದವು.

ಅಗತ್ಯ ಔಷಧಗಳ ಪಟ್ಟಿಯಿಂದ ಹೊರಗಿರಿಸಲಾದ 26 ಔಷಧಗಳ ಪಟ್ಟಿ ಇಲ್ಲಿದೆ..

  1. ಆಲ್ಟೆಪ್ಲೇಸ್
  2. ಅಟೆನೊಲೊಲ್
  3. ಬ್ಲೀಚಿಂಗ್ ಪೌಡರ್
  4. ಕ್ಯಾಪ್ರಿಯೋಮೈಸಿನ್
  5. ಸೆಟ್ರಮೇಡ್
  6. ಕ್ಲೋರ್ಫೆನಿರಾಮೈನ್
  7. ಡಿಲೋಕ್ಸನೈಡ್ ಫ್ಯೂರೋಯೇಟ್
  8. ಡಿಮರ್ಕಾಪೋಲ್
  9. ಎರಿಥ್ರೋಮೈಸಿನ್
  10. ಎಥಿನೈಲ್ಸ್ಟ್ರಾಡಿಯೋಲ್
  11. ನೊರೆಥಿಸ್ಟರಾನ್
  12. ಗ್ಯಾನ್ಸಿಕ್ಲೋವಿರ್
  13. ಕನಮೈಸಿನ್
  14. ಲ್ಯಾಮಿವುಡಿನ್
  15. ಲೆಪ್ಲುನೋಮೈಡ್
  16. ಮೆಥಿಲ್ಡೋಪಾ
  17. ನಿಕೋಟಿನಮೈಡ್
  18. ಪೆಗಿಲೆಟೆಡ್ ಇಂಟರ್ಫೆರಾನ್ ಆಲ್ಫಾ
  19. ಪೆಂಟಾಮಿಡಿನ್
  20. ಪ್ರಿಲೊಕೇನ್
  21. ಪ್ರೊಕಾರ್ಬಜಿನ್
  22. ರಾನಿಟಿಡಿನ್
  23. ರಿಫಾಬುಟಿನ್
  24. ಸ್ಟಾವುಡಿನ್
  25. ವೈಟ್ ಪೆಟ್ರೊಲಾಟಮ್
  26. ಮೆಥಿಲ್ಡೋಪಾ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!