ಇದು ಭಾರತ್ ಜೋಡೋ ಅಲ್ಲ..ಸೀಟ್‌ ಜೋಡೋ ಯಾತ್ರೆ: ಕಾಂಗ್ರೆಸ್‌ಗೆ ತಿವಿದ ಕಮ್ಯುನಿಸ್ಟರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಟೀಕೆ ಮಾಡಿದೆ.

ಯಾತ್ರೆ ಕೇರಳಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಕಾರ್ಟೂನ್‌ ಮೂಲಕ ಟ್ವೀಟ್‌ ಮಾಡಿರುವ ಸಿಪಿಐ-ಎಂ, ಕಾಂಗ್ರೆಸ್‌ನ ಈ ಭಾರತ್‌ ಜೋಡೋ ಯಾತ್ರೆ ಕೇರಳದಲ್ಲಿ ಬರೋಬ್ಬರಿ 18 ದಿನಗಳ ಕಾಲ ನಡೆಯಲಿದೆ. ಆದರೆ, ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಮಹತ್ತರವಾಗಿರುವ ಉತ್ತರಪ್ರದೇಶದಲ್ಲಿ ಕೇವಲ 2 ದಿನ ನಡೆಯಲಿದೆ. ಸಂಘದ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ಇದೊಂದು ವಿಚಿತ್ರ ಮಾರ್ಗ ಎಂದು ಸಿಪಿಐ(ಎಂ) ಬಣ್ಣಿಸಿದೆ.

ಸಿಪಿಐ-ಎಂ ರಚಿಸಿದ ಕಾರ್ಟೂನ್‌ಗೆ ಟೀಕೆ ಮಾಡಿರುವ ಕಾಂಗ್ರೆಸ್‌ ಪಕ್ಷ, ಕಮ್ಯುನಿಸ್ಟ್‌ ಪಕ್ಷದ ಬಗ್ಗೆ ನಾವು ಮಾತನಾಡೋದೇನಿದೆ. ಇದು ಬಿಜೆಪಿಯ ಎ ಟೀಮ್‌ ಎಂದು ಹೇಳಿದೆ.

ರಾಹುಲ್‌ ಗಾಂಧಿಯ ಚಿತ್ರವಿರುವ ಕಾರ್ಟೂನ್‌ಅನ್ನು ಸೋಮವಾರ ಸಿಪಿಐ-ಎಂ ತನ್ನ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದ್ದು, ಇದು ಭಾರತ್‌ ಜೋಡೋ ಯಾತ್ರೆಯ ರೀತಿ ಕಾಣುತ್ತಿಲ್ಲ. ಬಹುಶಃ ಕಾಂಗ್ರೆಸ್‌ನ ಸೀಟ್‌ ಜೋಡೋ ಯಾತ್ರೆ ಇರಬಹುದು ಎಂದಿದೆ. ಭಾರತ್‌ ಜೋಡೋ ಯಾತ್ರೆ ಕೇರಳದಲ್ಲಿ 18 ದಿನ ನಡೆದರೆ, ಚುನಾವಣೆಗೆ ಮಹತ್ವವಾಗಿರುವ ಹಾಗೂ ದೇಶದ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಬರೀ ಎರಡು ದಿನ ನಡೆಯಲಿದೆ. ಇದು ಬಿಜೆಪಿ ವಿರುದ್ಧ ಹೋರಾಡುವ ವಿಚಿತ್ರ ವಿಧಾನ ಎಂದು ಹೇಳಿದ್ದು, ಉತ್ತರ ಪ್ರದೇಶ ಹಾಗೂ ಕೇರಳದ ನಕ್ಷೆಯನ್ನೂ ಕಾರ್ಟೂನ್‌ನಲ್ಲಿ ಹಾಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!