ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆಯ ವಿಭಾಗಗಳ ಪೈಕಿ ಅತೀ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ 2023-24ನೇ ಆರ್ಥಿಕ ವರ್ಷದಲ್ಲಿ ಕೇಂದ್ರೀಯ ರೈಲ್ವೆ ವಲಯ ನಂ.1 ಸ್ಥಾನ ಪಡೆದುಕೊಂಡಿದೆ.
ಕಳೆದ ಆರ್ಥಿಕ ವರ್ಷದಲ್ಲಿ 146.5 ಕೋಟಿ ಪ್ರಯಾಣಿಕರನ್ನು ಕರೆದೊಯ್ದಿದ್ದ ಈ ವಲಯವು, ಈ ಆರ್ಥಿಕ ವರ್ಷದಲ್ಲಿ 158.3 ಕೋಟಿ ಪ್ರಯಾಣಿಕರನ್ನು ಕರೆದೊಯ್ದಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.8 ಹೆಚ್ಚಿನ ಸಾಧನೆಯಾಗಿದೆ.
ಕೇಂದ್ರೀಯ ರೈಲ್ವೆ ವಲಯವು 2023-24 ರಲ್ಲಿ ಒಟ್ಟು 7,311ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷದ ಆದಾಯ 6,414 ಕೋಟಿಯಾಗಿತ್ತು.