ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಬೆಡಗಿ ಪೂಜಾ ಹೆಗ್ಡೆ ಬಾಲಿವುಡ್ನಲ್ಲಿ ಸಾಕಷ್ಟು ಮಿಂಚಿದ್ದಾರೆ.
ಸದ್ಯಕ್ಕೆ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನಿಮಾದ ಪ್ರಚಾರದಲ್ಲಿ ಪೂಜಾ ಹೆಗಡೆ ಬ್ಯುಸಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ ಪೂಜಾ ಯಶ್ ಜೊತೆ ಆಕ್ಟಿಂಗ್ ಮಾಡೋ ಆಸೆಯನ್ನು ಹೊರಗೆ ಹಾಕಿದ್ದಾರೆ. ರಾಕಿ ಭಾಯ್ ಲೆಜೆಂಡ್, ಅವರನ್ನು ಫಂಕ್ಷನ್ ಒಂದರಲ್ಲಿ ಮಾತನಾಡಿಸಿದ್ದೆ ಅಷ್ಟೆ, ಮುಂದಿನ ದಿನಗಳಲ್ಲಿ ಅವರ ಜೊತೆ ಸಿನಿಮಾ ಮಾಡ್ತೇನೆ ಎಂದು ಹೇಳಿದ್ದಾರೆ.
ಸಾಲು ಸಾಲು ಫ್ಲಾಪ್ ಸಿನಿಮಾ ಕೊಟ್ಟ ಪೂಜಾ ಇದೀಗ ಸಲ್ಲು ಜೊತೆಗಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಭರ್ಜರಿ ಪ್ರಚಾರ ನಡೆಸುತ್ತಿದ್ದು, ಸಿನಿಮಾ ಹಿಟ್ ಆಗತ್ತಾ? ಕಾದು ನೋಡಬೇಕಿದೆ.