VIRAL VIDEO| ಹೀರೋ ಆದ ಪಿಜ್ಜಾ ಡೆಲಿವರಿ ಬಾಯ್:‌ ಈತನ ಸಾಹಸಕ್ಕೆ ಪೊಲೀಸರು ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುಎಸ್‌ನ ಪೆನ್ಸಿಲ್ವೇನಿಯಾದಲ್ಲಿ 29 ವರ್ಷದ ಪಿಜ್ಜಾ ಡೆಲಿವರಿ ಬಾಯ್ ಟೈಲರ್ ಮೊರೆಲ್ ಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಮೊರೆಲ್ ಮಿಡ್ಲ್‌ಟೌನ್ ಟೌನ್‌ಶಿಪ್‌ನಲ್ಲಿರುವ ಗ್ರಾಹಕರ ಮನೆಗೆ ಪಿಜ್ಜಾ ಡೆಲಿವರಿ ಮಾಡಲು ಹೋದರು. ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಪೊಲೀಸ್ ವ್ಯಾನ್ ಸೈರನ್ ಮೊಳಗಗಿದೆ. ಪೊಲೀಸ್ ವ್ಯಾನ್ ಕಾರನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಕಾರನ್ನು ಕದಿಯುವ ಕಳ್ಳನನ್ನು ವ್ಯಾನ್ ಹಿಂಬಾಲಿಸುತ್ತಿರುವಾಗ ಕಾರಿನಿಂದ ಜಿಗಿದ ಕಳ್ಳ ಮೋರೆಲ್ ಕಡೆಗೆ ಓಡಿ ಬಂದ. ಮೋರೆಲ್ ಒಂದು ಕ್ಷಣವೂ ನಿಲ್ಲದೆ ಕಾಲನ್ನು ಅಡ್ಡ ಕೊಟ್ಟು ಕಳ್ಳನನ್ನು ಬೀಳುವಂತೆ ಮಾಡಿ ಪೊಲೀಸರಿಗೊಪ್ಪಿಸಿದ್ದಾನೆ.

ಈ ಎಲ್ಲ ಘಟನೆ ಡೋರ್‌ಬೆಲ್ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.

ಮೊರೆಲ್ ಅವರ ಧೈರ್ಯವನ್ನು ಪೊಲೀಸರು ಸಹ ಶ್ಲಾಘಿಸಿದರು. ಅವರ ಸಹಾಯಕ್ಕೆ ಧನ್ಯವಾದ ಹೇಳುತ್ತಾ ನಿಮ್ಮಂತಹ ಒಳ್ಳೆಯವರಿಗೆ ಕೆಲಸ ಕೊಡಲು ಸದಾ ಸಿದ್ಧ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂತಹ ಉದ್ಯೋಗಿಯನ್ನು ನೇಮಿಸಿಕೊಂಡಿದ್ದಕ್ಕಾಗಿ ಕೊಕೊಸ್ ಪಿಜ್ಜಾ ಅಭಿನಂದನೆ ಸಲ್ಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!